ಬೆಂಗಳೂರು: ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಿನಿಮಾ ಗಂಧದಗುಡಿ ಟ್ರೈರಲ್ ಬಿಡುಗಡೆಯಾಗಿ 24 ಗಂಟೆಗಳು ಕಳೆದಿದ್ದು, ಒಂದು ಕೋಟಿ ವೀಕ್ಷಣೆ ಪಡೆದು ಹೊಸ ದಾಖಲೆ ನಿರ್ಮಿಸಿದೆ.
ಹೌದು, ಕಳೆದ 24 ಗಂಟೆಯಲ್ಲಿ ಈ ಟ್ರೈಲರ್ ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಪಡೆಯುವ ಮೂಲಕ ಗಂಧದಗುಡಿ ಟ್ರೈಲರ್ ಯೂಟ್ಯೂಬ್ ನಲ್ಲಿ ದೂಳೆಬ್ಬಿಸಿದೆ.
ಅಪ್ಪು ಅಭಿನಯದ ಗಂಧದಗುಡಿ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಇದೇ ಅಕ್ಟೋಬರ್ 28ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ ಎಂದು ಅಪ್ಪು ಪತ್ನಿ ಅಶ್ವಿನಿ ಅವರು ಘೋಷಿಸಿದ್ದಾರೆ.
ಬೆಂಗಳೂರಿನ ನರ್ತಕಿ ಥಿಯೇಟರ್ ನಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಗಂಧದಗುಡಿ ಸಿನಿಮಾ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಟ್ರೈಲರ್ ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದರೆ. ಸೆಲೆಬ್ರಿಟಿಗಳು, ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.