ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ನ್ಯೂಯಾರ್ಕ್‌ನ ಫೆಡರಲ್ ಕೋರ್ಟ್‌ನಲ್ಲಿ ವಂಚನೆ ಮತ್ತು ಲಂಚದ ಆರೋಪದ ಮೇಲೆ ಅದಾನಿ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಕಚೇರಿಯ ಪ್ರಕಾರ, ಅದಾನಿ ಭಾರತದಲ್ಲಿ ಸೌರ ಯೋಜನೆಯ ಗುತ್ತಿಗೆ ಪಡೆದುಕೊಳ್ಳಲು ಭಾರತದ ಅಧಿಕಾರಿಗಳಿಗೆ ಅಧಿಕಾರಿಗಳಿಗೆ $250 ಮಿಲಿಯನ್ (ರೂ. 21 ಶತಕೋಟಿಗೂ ಹೆಚ್ಚು) ಲಂಚವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಹಣ ವಸೂಲಿ ಮಾಡಲು ಅಮೆರಿಕ ಸೇರಿದಂತೆ ಇತರ ದೇಶಗಳ ಹೂಡಿಕೆದಾರರು ಮತ್ತು ಬ್ಯಾಂಕುಗಳನ್ನು ವಂಚಿಸಲಾಗಿದೆ.
ಆರೆಸ್ಟ್ ವಾರಂಟ್‌ಗಳು
ಆರೋಪ ಎದುರಿಸುತ್ತಿರುವ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಅಧಿಕಾರಿಗಳಲ್ಲಿ ಉದ್ಯಮಿಯ ಆಪ್ತರಾದ ಸಾಗರ್ ಮತ್ತು ವಿನೀತ್ ಜೈನ್ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಗೌತಮ್ ಮತ್ತು ಸಾಗರ್ ಅದಾನಿ ವಿರುದ್ಧವೂ ಬಂಧನ ಆರೆಸ್ಟ್ ಜಾರಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗೌತಮ್ ಅದಾನಿ, ಸಾಗರ್ ಆರ್. ಅದಾನಿ, ವಿನೀತ್ ಎಸ್. ಜೈನ್, ರಂಜಿತ್ ಗುಪ್ತಾ, ರೂಪೇಶ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ಸೌರಭ್ ಅಗರ್ವಾಲ್ ಮತ್ತು ಸಿರಿಲ್ ಕ್ಯಾಬನೇಜ್ ಅವರ ಮೇಲೆ ಆರೋಪಗಳನ್ನು ಹೊರಿಸಲಾಗಿದೆ. ಆದರೆ, ಈ ವಿಚಾರವಾಗಿ ಅದಾನಿ ಗ್ರೂಪ್ ಕಂಪನಿಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಆರೋಪಿಗಳು 2020 ಮತ್ತು 2024ರ ನಡುವೆ ಸೌರ ವಿದ್ಯುತ್ ಒಪ್ಪಂದದ ಗುತ್ತಿಗೆಯನ್ನ ಪಡೆಯಲು ಅಕ್ರಮ ಮಾರ್ಗಗಳನ್ನು ಅನುಸರಿಸಿದ್ದಾರೆ ಎಂದು ವಾದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ ಲಂಚ ನೀಡಲು ಸಂಚು ರೂಪಿಸಿದ್ದರು. ಈ ಒಪ್ಪಂದವು 20 ವರ್ಷಗಳಲ್ಲಿ ಎರಡು ಬಿಲಿಯನ್ ಡಾಲರ್‌ಗಳಷ್ಟು ಲಾಭವನ್ನು ಗಳಿಸುವ ನಿರೀಕ್ಷೆಯಿದೆ. ಆ ಉದ್ದೇಶಕ್ಕಾಗಿ, ಸುಳ್ಳು ಹೇಳಿಕೆಗಳು ಮತ್ತು ಯೋಜನೆಗಳ ಆಧಾರದ ಮೇಲೆ ಸಾಲ ಮತ್ತು ಬಾಂಡ್‌ಗಳನ್ನು ಸಂಗ್ರಹಿಸಲಾಗಿದೆ.
ಹಣದ ಸಂಗ್ರಹ
ಇದರ ಒಂದು ಭಾಗವನ್ನು ಅಮೆರಿಕದ ಕಂಪನಿಗಳಿಂದಲೂ ಸಂಗ್ರಹಿಸಲಾಗಿದೆ ಎನ್ನಲಾಗುತ್ತಿದೆ. ನ್ಯೂಯಾರ್ಕ್‌ನಲ್ಲಿ ದಾಖಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಲಂಚ ವಿರೋಧಿ ನೀತಿಗಳಡಿ ದಾರಿತಪ್ಪಿಸುವ ಜಾಹೀರಾತುಗಳ ಮೂಲಕ ಹಣವನ್ನು ಸಂಗ್ರಹಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಎಫ್‌ಬಿಐ ಮತ್ತು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ತನಿಖೆಯನ್ನು ತಡೆಯಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬುದು ಗಮನಾರ್ಹ.