Home ದೆಹಲಿ ವಾಣಿಜ್ಯ ಸಿಲಿಂಡರ್‌ ಬಳಕೆದಾರರಿಗೆ ಸಿಹಿ ಸುದ್ದಿ -200 ಬೆಲೆ ಇಳಿಕೆ

ವಾಣಿಜ್ಯ ಸಿಲಿಂಡರ್‌ ಬಳಕೆದಾರರಿಗೆ ಸಿಹಿ ಸುದ್ದಿ -200 ಬೆಲೆ ಇಳಿಕೆ

ನವದೆಹಲಿ : ಬಹುದಿನಗಳ ಬಳಿಕ ವಾಣಿಜ್ಯ ಸಿಲಿಂಡರ್‌ (Commercial LPG Cylinder) ಬಳಕೆದಾರರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಬೆಂಗಳೂರು, ದೆಹಲಿ, ಕೋಲ್ಕತ್ತಾ ಸೇರಿದಂತೆ ಹಲವು ಮಹಾನಗರಗಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆ (LPG Cylinder Price) 200 ರೂ.ಗಳಷ್ಟು ಇಳಿಕೆಯಾಗಿದೆ.

ಇಂದು ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 209, ದೆಹಲಿಯಲ್ಲಿ (Delhi) 202 ರೂ.ಗಳಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 200 ರೂ. ಇಳಿಕೆಯಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.

ಕೋಲ್ಕತ್ತಾದಲ್ಲಿ (Kolkata) ಪ್ರತಿ 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 209 ರೂ. ಇಳಿಕೆಯಾಗಿದ್ದು ಪ್ರತಿ ಸಿಲಿಂಡರ್‌ ಬೆಲೆ 2,872.50 ರೂ.ಗೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್‌ ಮೇಲಿನ ಬೆಲೆ 202 ರೂ. ಇಳಿಕೆಯಾಗಿದ್ದು, 2,728 ರೂ.ಗೆ ಇಳಿದಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆ (ರೀಟೇಲ್‌ ದರ) 2,930ರೂ. ರಷ್ಟಿದ್ದು, ಹೊಸ ದರಗಳು ಜುಲೈ 1 ರಿಂದ ಜಾರಿಗೆ ಬಂದಿವೆ.

ಒಟ್ಟಿನಲ್ಲಿ ಬೆಲೆ ಇಳಿಕೆಯು ಇದು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಫಾಸ್ಟ್‌ಫುಡ್‌ ಹಾಗೂ ಕ್ಯಾಟರಿಂಗ್‌ ಮಾಲೀಕರಿಗೆ ಗುಡ್‌ನ್ಯೂಸ್‌ ಕೊಟ್ಟಂತಾಗಿದೆ. ಆದ್ರೆ ಗೃಹಬಳಕೆ ಸಿಲಿಂಡರ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಒಂದು ತಿಂಗಳಲ್ಲಿ 2ನೇ ಬಾರಿ ಇಳಿಕೆ
ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಕಳೆದ ತಿಂಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 183.50 ರೂ. ನಷ್ಟು ಕಡಿಮೆ ಮಾಡಿದ್ದವು. ಇದೀಗ ಒಂದು ತಿಂಗಳಲ್ಲಿ 2ನೇ ಬಾರಿಗೆ ಬೆಲೆ ಇಳಿಕೆಯಾಗಿದೆ.

ಇದರೊಂದಿಗೆ 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್) ಸಿಲಿಂಡರ್‌ನ ಬೆಲೆಯನ್ನ 13% ಕಡಿಮೆ ಮಾಡಿದ್ದು, ದೆಹಲಿಯಲ್ಲಿ ಸಿಲಿಂಡರ್‌ ಚಿಲ್ಲರೆ ಬೆಲೆ 808.50 ರೂ.ಗೆ ಕ್ಕೆ ಪರಿಷ್ಕರಿಸಲಾಗಿದೆ. ಕಳೆದ ಜೂನ್‌ನಲ್ಲಿ, 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 29 ರೂ.ಗಳಷ್ಟು ಹೆಚ್ಚಾಗಿದ್ದು, ದೆಹಲಿಯಲ್ಲಿ ಚಿಲ್ಲರೆ ಬೆಲೆ 913 ರೂ.ಗಳಿಂದ 942 ರೂ.ಗಳಿಗೆ ತಲುಪಿದೆ.

You cannot copy content of this page

Exit mobile version