ಹಾಸನ : ಪ್ರಸ್ತೂತದಲ್ಲಿ ಜಿಲ್ಲೆ ಒಳಗೆ ಹೃದಯ ಘಾತದಿಂದ ಸಾವು-ನೋವುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರು ಕೂಡ ಎಚ್ಚೆತ್ತುಕೊಳ್ಳುವುದರ ಜೊತೆಗೆ ಆರೋಗ್ಯ ಇಲಾಖೆಯು ಅಗತ್ಯ ಚಿಕಿತ್ಸ ಕ್ರಮಕೈಗೊಳ್ಳಬೇಕು. ಶೀಘ್ರದಲ್ಲಿಯೇ ಮೆಗಾ ಹೈದ್ರೋಗ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಬೇಕೆಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸಭೆಯಲ್ಲಿ ಸಲಹೆ ನೀಡಿದರು.
ನಗರದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹೃದಯ ಸಂಬಂಧಿಸಿದ ಖಾಯಿಲೆ ಬಗ್ಗೆ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮತ್ತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಆಂಬುಲೆನ್ಸ್ ಗಳ ಕಾರ್ಯಾಚರಣೆ ಸರಿಯಾಗಿ ನಡೆಯಬೇಕು ಕೆಲ 108 ಆಂಬುಲೆನ್ಸ್ ಗಳು ರೋಗಿಗಳನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಗುರುತಿಸಿ ಅಂತಹವರ ವಿರುದ್ದ ಕ್ರಮ ಆಗಬೇಕು. ಯಾವುದೇ ರೋಗಿ ಖಾಸಗಿ ಆಸ್ಪತ್ರೆಗೆ ಹೋದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರು ಕೆಲಸ ಮಾಡುತ್ತಾರಾ ಎನ್ನೋ ಬಗ್ಗೆ ಪರಿಶೀಲನೆ ನಡೆಸಬೇಕು. ಹಾಸನ ಜಿಲ್ಲೆಯಲ್ಲಿ 46 ದಿನದಲ್ಲಿ 41 ಜನರ ಸಾವಾಗಿದೆ. ಸಾವುಗಳು ಆಗದಂತೆ ತಡೆಯೋ ಪ್ರಯತ್ನ ಮಾಡಲು ಮುಂದಾಗಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಸರಣಿಯಾಗಿ ಹೃದಯಾಘಾತ ಸಾವು ಪ್ರಕರಣ ವಿಚಾರವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸರಣಿ ಸಾವಿಗೆ ಮಾಂಸಾಹಾರ ಸೇವನೆ, ಬೀಗರೂಟಗಳಲ್ಲಿ ಅತಿಯಾದ ರೆಡಿ ಮೀಟ್ ಸೇವನೆ ಎನ್ನೋ ಮಾತು ಕೇಳಿ ಬರ್ತಿದೆ. ಜೀವನ ಶೈಲಿ ಬದಲಾಗಬೇಕು. ಜಿಲ್ಲೆಯಲ್ಲಿ ಬಾರ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಲಾಯಿತು. ಆದಾಯ ಹೆಚ್ಚು ಬರುತ್ತದೆ ಅಂತಾ ಜಿಲ್ಲೆಯಲ್ಲಿ ಬಾರ್ ಜಾಸ್ತಿ ಕೊಟ್ಟಿದಾರೆ. ಈ ಬಾರ್ ಗಳಲ್ಲಿ ಕುಡಿದು ಅನಾಹುತ ಆಗ್ತಿದೆ ಎಂದು ರೇವಣ್ಣ ಅಸಮದಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಹಿಮ್ಸ್ ನಿರ್ದೇಶಕ ಡಾ. ರಾಜಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್ ಇತರರು ಉಪಸ್ಥಿತರಿದ್ದರು.