ಜು.11 ರಂದು ಕಲಾಭವನದಲ್ಲಿ ಉಚಿತ ಎರಡು ನಾಟಕ ಉಚಿತ ಪ್ರದರ್ಶನ ಶಾಡ್ರಾಕ್ ಮಾಹಿತಿ
ಹಾಸನ : ಇದೆ ತಿಂಗಳು 11ರ ಶುಕ್ರವಾರದಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಾಯಾಮೃಗ ಮತ್ತು ಎದೆಯ ಹಣತೆ ಎಂಬ ಎರಡು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಣೆ ಮಾಡುವುದರ ಮೂಲಕ ಯಶಸ್ವಿಗೊಳಿಸುವಂತೆ ರಂಗಸಿರಿ ಕಾರ್ಯದರ್ಶಿ ಶಾಡ್ರಾಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಗರದಲ್ಲಿ 2025 ಜುಲೈ 11ರ ಶುಕ್ರವಾರ ಸಂಜೆ 5:30ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಪೂರ್ಣ ಚಂದ್ರ ತೇಜಸ್ವಿಯವರ ಮಾಯಾಮೃಗ ನಾಟಕ ಹಾಗೂ ಭಾನು ಮುಷ್ತಾಕ್ ಅವರ ಎದೆಯ ಹಣತೆ ಸೇರಿ ಎರಡು ನಾಟಕ ಪ್ರದರ್ಶನಗೊಳ್ಳಲಿದೆ. ಒಂದು ನಾಟಕ ಮಾಯಾಮೃಗವನ್ನು ರಂಜಿತ್ ಶೆಟ್ಟಿ ಕುಕ್ಕುಡೆ ನಿರ್ದೇಶನ ಮಾಡಿದ್ದು, ಇನ್ನೊಂದು ಎದೆಯ ಹಣತೆ ನಾಟಕವನ್ನ ಡಾ. ಎಂ. ಗಣೇಶ್ ಹೆಗ್ಗೋಡ್ ನಿರ್ದೇಶಿಸಿದ್ದಾರೆ ಎಂದರು. ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು ಅರ್ಪಿಸುವ ಜನಮನದಾಟ ಅಭಿನಯಿಸುವ ಪೂರ್ಣಚಂದ್ರ ತೇಜಸ್ವಿ ಹಾಗೂ ಭಾನು ಮುಷ್ತಾಕ್ ಅವರ ಕಥಗಳನ್ನು ಆಧರಿಸಿ ಈ ನಾಟಕ ಪ್ರದರ್ಶನ ನಡೆಯಲಿದೆ. ಪೂರ್ಣಚಂದ್ರ ತೇಜಸ್ವಿ ಅವರ ಮಾಯಾಮೃಗ ನಾಟಕವನ್ನು ರಂಜಿತ್ ಕುಕ್ಕಡೆ ಅವರು ನಿರ್ದೇಶಿಸಿದ್ದು, ಅಂತಾರಾಷ್ಟಿçÃಯ ಭೂಕರ್ ಪ್ರಶಸ್ತಿ ಪುರಸ್ಕöÈತ ಹಿರಿಯ ಸಾಹಿತಿ ಭಾನು ಮುಷ್ತಾಕ್ ಅವರ ಎದೆಯ ಹಣತೆ ನಾಟಕವನ್ನು ಎಂ. ಗಣೇಶ್ ಹೆಗ್ಗೋಡು ಅವರು ನಿರ್ದೇಶನ ಮಾಡಿದ್ದಾರೆ. ಎರಡು ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಜ್ಜಾಗಿದ್ದು ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಬೂಕರ್ ಪ್ರಶಸ್ತಿಗೆ ಬಾಜನರಾಗಿ ಜಿಲ್ಲೆಗೆ ಗೌರವ ತಂದಿರುವಂತಹವರ ಎದೆಯ ಹಣತೆ ಮತ್ತು ಪೂರ್ಣ ಚಂದ್ರ ತೇಜಸ್ವಿಯವರ ಮಾಯಾಮೃಗ ನಾಟಕ ಪ್ರದರ್ಶನ ಆಗುತ್ತಿರುವುದು ಸಂತೋಷದ ವಿಚಾರವಾಗಿದೆ. ಯಾವುದೆ ಒಂದು ಕಾರ್ಯಕ್ರಮ ಮಾಡಿದರೂ ಸಮಾಜಕ್ಕೆ ಸಂದೇಶ ಕೊಡುವಂತಿರಬೇಕು. ರಂಗಸಿರಿ ಕಲಾವಿದರು ಎಂದರೇ ಅನುಭವ ಹೊಂದಿರುವ ಕಲಾವಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಹೆಚ್.ಪಿ. ಸ್ವರೂಪ್, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಹಿರಿಯ ಮತ್ತು ಕಿರಿಯ ರಂಗಭೂಮಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ನಾಟಕದ ಬಗ್ಗೆ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಲಾವಿದ ಸುರೇಶ್, ಪ್ರಾಂಶುಪಾಲ ಚಂದ್ರಕಾಂತ ಪಡೆಸುರ್, ಸಮಾಜ ಸೇವಕ ಹೆಮ್ಮಿಗೆ ಮೋಹನ್, ಹಿರಿಯ ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ರಂಗಸಿರಿ ಹಿರಿಯ ಕಲಾವಿದ ಜವರಯ್ಯ ಇತರರು ಉಪಸ್ಥಿತರಿದ್ದರು.