WPL 2025 ರ ಭಾಗವಾಗಿ ಸೋಮವಾರ ರಾತ್ರಿ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಜೈಂಟ್ಸ್ ವಿರುದ್ಧ ಜಯಗಳಿಸಿತು. 180 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡವು ನಿಗದಿತ 20 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟ್ ಆಯಿತು.
ಭಾರ್ತಿ ಫುಲ್ಮಾಲಿ (61; 25 ಎಸೆತಗಳಲ್ಲಿ 8×4, 4×6) ಅರ್ಧಶತಕ ಗಳಿಸಿದರೆ, ಹರ್ಲೀನ್ ಡಿಯೋಲ್ (24) ಮತ್ತು ಲಿಚ್‌ಫೀಲ್ಡ್ (22) ರನ್ ಗಳಿಸಿದರು. ಮುಂಬೈ ಬೌಲರ್‌ಗಳಾದ ಹೀಲಿ ಮತ್ತು ಅಮೆಲಿಯಾ ಕೆರ್ ತಲಾ ಮೂರು ವಿಕೆಟ್ ಪಡೆದರು. ಈ ಪಂದ್ಯಕ್ಕೂ ಮುನ್ನ ಮುಂಬೈ ಮತ್ತು ಗುಜರಾತ್ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ನಾಯಕಿ ಹರ್ಮನ್ಪ್ರೀತ್ ಕೌರ್ (54; 33 ಎಸೆತಗಳಲ್ಲಿ 9×4) ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ನಾಟ್ಸಿವರ್ (38; 31 ಎಸೆತಗಳಲ್ಲಿ 6×4) ಮತ್ತು ಅಮನ್‌ಜ್ಯೋತ್ ಕೌರ್ (27; 15 ಎಸೆತಗಳಲ್ಲಿ 3×4, 1×6) ಅವರೊಂದಿಗೆ ಪ್ರಮುಖ ಪಾಲುದಾರಿಕೆಯನ್ನು ನಿರ್ಮಿಸಿ ತಂಡಕ್ಕೆ ಬೃಹತ್ ಸ್ಕೋರ್ ಒದಗಿಸಿದರು.
ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ (27; 22 ಎಸೆತಗಳಲ್ಲಿ 3×4, 2×6) ಕೂಡ ಪ್ರಭಾವಿ ಬ್ಯಾಟ್ಸ್‌ಮನ್ ಆಗಿ ಮಿಂಚಿದರು. ಕೊನೆಯ 5 ಓವರ್‌ಗಳಲ್ಲಿ ಮುಂಬೈ 62 ರನ್ ಗಳಿಸಿತು. ಗುರಿ ಬೆನ್ನಟ್ಟುವಲ್ಲಿ ಗುಜರಾತ್ ಎಡವಿತು. 11 ಓವರ್‌ಗಳ ನಂತರ ಸ್ಕೋರ್ 70/5 ಆಗಿದ್ದರಿಂದ, ಗುಜರಾತ್ ಕತೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಬಾರಿ ಭಾರ್ತಿ ಅದ್ಭುತ ಇನ್ನಿಂಗ್ಸ್ ಆಡಿದರು.
ಕೊನೆಯ ಓವರ್‌ನಲ್ಲಿ 13 ರನ್‌ಗಳು ಬೇಕಾಗಿದ್ದಾಗ, ಹೀಲಿ 3 ವಿಕೆಟ್ ಪಡೆದು 3 ರನ್‌ಗಳನ್ನು ಬಿಟ್ಟುಕೊಟ್ಟಿದ್ದರಿಂದ ಗುಜರಾತ್ ಸೋತಿತು.