Home ದೇಶ ಹರಿಯಾಣ ಚುನಾವಣಾ ಫಲಿತಾಂಶ: ಬಿಜೆಪಿ ಧೂಳೀಪಟ, ಪ್ರಚಂಡ ಬಹುಮತದತ್ತ ದಾಪುಗಾಲಿಟ್ಟ ಕಾಂಗ್ರೆಸ್!

ಹರಿಯಾಣ ಚುನಾವಣಾ ಫಲಿತಾಂಶ: ಬಿಜೆಪಿ ಧೂಳೀಪಟ, ಪ್ರಚಂಡ ಬಹುಮತದತ್ತ ದಾಪುಗಾಲಿಟ್ಟ ಕಾಂಗ್ರೆಸ್!

0

Haryana Election Results 2024: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಪರ್ ಬಹುಮತದತ್ತ ಸಾಗುತ್ತಿದೆ. ಇಲ್ಲಿ ಬೆಳಗ್ಗೆ 9ರವರೆಗಿನ ಟ್ರೆಂಡ್ ಪ್ರಕಾರ ಕಾಂಗ್ರೆಸ್ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ 19 ಸ್ಥಾನಗಳಲ್ಲಿ ಮುಂದಿದೆ.

INLD ಎರಡು ಮತ್ತು ಇತರ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಆರಂಭಿಕ ಟ್ರೆಂಡ್‌ಗಳ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇಡ, ಇಂದು ನಾವು ದಿನವಿಡೀ ಲಡ್ಡು ಮತ್ತು ಜಿಲೇಬಿ ತಿನ್ನುತ್ತೇವೆ ಎಂಬ ವಿಶ್ವಾಸವಿದೆ, ನಾವು ಪ್ರಧಾನಿ ಮೋದಿಯವರಿಗೂ ಜಿಲೇಬಿ ಕಳುಹಿಸಲಿದ್ದೇವೆ. ಜಮ್ಮು-ಕಾಶ್ಮೀರ ಮತ್ತು ಹರಿಯಾಣದಲ್ಲಿ ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದೇವೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.

ಹರಿಯಾಣದಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳ ಅಗತ್ಯವಿದೆ.

You cannot copy content of this page

Exit mobile version