೨೦ ಲಕ್ಷಕ್ಕೂ ಹೆಚ್ಚು ಭಕ್ತರಿಂದ ವೀಕ್ಷಣೆ
ಹಾಸನ: ಹಾಸನಾಂಬೆ ದೇವಿ ದರ್ಶನವು ಅಕ್ಟೋಬರ್ ೨೪ಕ್ಕೆ ಬಾಗಿಲು ತೆಗೆದು ನವೆಂಬರ್ ೩ರ ಭಾನುವಾರದಂದು ಶಾಸ್ತ್ರೋತ್ತವಾಗಿ ಪೂಜೆ ಸಲ್ಲಿಸಿ ಗಣ್ಯರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮದ್ಯಾಹ್ನ ೧೨:೩೪ಕ್ಕೆ ಬಾಗಿಲು ಮುಚ್ಚುವ ಮೂಲಕ ೨೦೨೪ರ ದರ್ಶನೋತ್ಸವಕ್ಕೆ ತೆರೆ ಎಳೆಯಲಾಯಿತು.
ಹಾಸನಾಂಬೆ ದೇವಾಲಯದ ಬಾಗಿಲು ಹಾಕುವ ವೇಳೆ ಕೆಲ ಸಮಯದಲ್ಲಿ ನೆರೆದಿರುವ ಭಕ್ತರಿಗೆ ದೇವಿ ದರ್ಶನವನ್ನು ಕಲ್ಪಿಸಿದರು. ಬೆಳಗ್ಗೆ ಪೂಜೆ, ನೈವೇದ್ಯಕ್ಕಾಗಿ ಸಾರ್ವಜನಿಕ ದರ್ಶನ ಬಂದ್ ಆಗಿದ್ದರಿಂದ ಸಾವಿರಾರು ಭಕ್ತರು ದರ್ಶನ ಸಾಧ್ಯವಾಗದೇ ನಿರಾಸೆಗೊಂಡರು ಆದರೂ ಭಕ್ತರು ದರ್ಶನಕ್ಕಾಗಿ ಕಾದು ಕುಳಿತು ಅವಕಾಶ ಕೇಳಿದ ಭಕ್ತರ ಕೋರಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ ಸಾಲಿನಲ್ಲಿ ನಿಂತವರಿಗೆ ದೇವಿ ವಿಶ್ವರೂಪ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು. ಸಂಪ್ರದಾಯದಂತೆ ಪೂಜೆ, ನೈವೇದ್ಯ ನೆರವೇರಿಸಿ ನಂದಾದೀಪ ಹಚ್ಚಿಟ್ಟ ಅರ್ಚಕರು ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇ ಗೌಡ,ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್ , ಮಂಜುನಾಥ್ (ಸಿಮೆಂಟ್ ಮಂಜು)ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ಮತ್ತಿತರರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಮುಚ್ಚಿ ಮುದ್ರೆ ಹಾಕಿ ಸೀಲ್ ಮಾಡಲಾಯಿತು. ಕೀಲಿ ಕೈ ಅನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಅನಾರೋಗ್ಯದ ಕಾರಣ ನೀಡಿ ಗರ್ಭಗುಡಿ ಬಾಗಿಲು ಮುಚ್ಚುವ ವೇಳೆ ಗೈರಾಗಿದ್ದರು. ಅವರು ನವೆಂಬರ್ ೧ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಇನ್ನು ಕಳೆದ ವರ್ಷ ೧೪ಲಕ್ಷ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಈ ವರ್ಷ ೨೦ ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುವ ಮೂಲಕ ಇತಿಹಾಸ ದಾಖಲೆ ಬರೆದಿದೆ.
ಗರ್ಭಗುಡಿ ಬಾಗಿಲು ಮುಚ್ಚಿದ ನಂತರ ಮಾಧ್ಯಮದೊಂದಿಗೆ ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಅನಾರೋಗ್ಯ ದ ಕಾರಣ ಉಸ್ತುವಾರಿ ಸಚಿವರು ಬಂದಿರುವುದಿಲ್ಲ. ಸಚಿವರು ಸಂದೇಶ ಕಳಿಸಿದ್ದಾರೆ.
ಎಲ್ಲಾ ಅದಿಕಾರಿಗಳ ಪರಿಶ್ರಮದಿಂದ ಹಾಸನಾಂಬೆ ಉತ್ಸವ ಯಶಸ್ವಿ ಆಗಿದೆ. ೨೦ ಲಕ್ಷದ ೪೦ ಸಾವಿರ ಭಕ್ತರು ಈ ವರ್ಷ ದರ್ಶನ ಮಾಡಿದ್ದಾರೆ. ೯.೬೯ ಕೋಟಿ ಆದಾಯ ಈಗಾಗಲೆ ಬಂದಿದೆ. ಟಿಕೇಟ್ ಮಾರಾಟ ಹಾಗು ಲಡ್ಡು ಮಾರಾಟದಿಂದ ಸಾಕಷ್ಟು ಆದಾಯಹರಿದು ಬಂದಿದ್ದು, ಡಿಸಿ, ಎಸ್ಪಿ, ಎಸಿ ಹಾಗು ಅವರ ಅದಿಕಾರಿ ಸಿಬ್ಬಂದಿ ವರ್ಗ ಪರಿಶ್ರಮದಿಂದ ಈ ಉತ್ಸವ ಯಶಸ್ವಿ ಆಗಿದೆ. ಉಸ್ತುವಾರಿ ಸಚಿವರು ಕೂಡ ಉತ್ಸವ ಯಶಸ್ವಿ ಗೊಳಿಸಿದ್ದು, ಎಲ್ಲಾರಿಗು ಕೂಡ ಶುಭಾಶಯ ತಿಳಿಸುತ್ತೇನೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ದಿನಗಳಲ್ಲಿ ಬಂದು ಸಣ್ಣ ಪುಟ್ಟ ತಪ್ಪು ಆಗಿದೆ ಈ ಬಗ್ಗೆ ಮಾಹಿತಿ ಪಡೆದು ಸಭೆ ನಡೆಸುತ್ತಾರೆ. ಮುಂದಿನ ಬಾರಿ ಇನ್ನಷ್ಟು ಸೂಕ್ತ ಸೌಲಭ್ಯ ಒದಗಿಸಿ ದರ್ಶನಾವಾಕಾಶ ಮಾಡಲಾಗುವುದು. ಸ್ವಲ್ಪ ಅಡಚಣೆಗಳನ್ನು ಮುಂದಿನ ವರ್ಷ ಸರಿಪಡಿಸಿಕೊಂಡು ಅನುಕೂಲ ಮಾಡುತ್ತೇವೆ ಎಂದು ಹೇಳಿದರು.
ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಇಷ್ಟೊಂದು ಜನರು ಬರುತ್ತಾರೆ ಎಂದರೇ ಸಾಮಾನ್ಯವಾದುದಲ್ಲ. ದೇವರ ಮೇಲೆ ಇರುವ ಪೂಜ್ಯ ಭಾವನೆ ಹೇಳಿ ಕೇಳಿ ಬರುವುದಲ್ಲ. ಇದು ಮನುಕುಲದ ಸನಾತನ ಧರ್ಮದ ಇತಿಹಾಸದ ಪರಂಪರೆ ಹೊಂದಿರುವುದು. ಹಾಸನಾಂಬೆ ದರ್ಶನದ ವೇಳೆ ಸಲ್ಪ ಅಡಚಣೆಯಾಗಿದೆ. ನಾವು ಜಿಲ್ಲಾಡಳಿತ ಹಗಲು ಇರುಳು ಕೆಲಸ ಮಾಡಲಾಗಿದ್ದು, ಕೆಲ ಭಿನ್ನಾಭಿಪ್ರಾಯಗಳಿಂದ ಆಗಿದೆ. ಭೇದ ಭಾವ ಮಾಡಿದವರಿಗೆ ತಾಯಿ ಹಾಸನಾಂಬೆ ನೋಡಿಕೊಳ್ಳುತ್ತಾಳೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ನಡೆದಿರುವ ಘಟನೆ ಕ್ಷುಲಕ ಎಂದು ಭಾವಿಸಿ. ಅತಿರಥ ಮಹ ರಾಜಕಾರಣಿಗಳು ಬಂದು ದೇವಿ ದರ್ಶನ ಮಾಡಿದ್ದಾರೆ ಎಂದು ಮೆಚ್ಚಿಗೆವ್ಯಕ್ತಪಡಿಸಿದರು. ಸಣ್ಣಪುಟ್ಟ ತಪ್ಪು ಆಗಿರುವುದಕ್ಕೆ ವಿಷಾಧವ್ಯಕ್ತಪಡಿಸಿದರು. ಈ ತಪ್ಪುಗಳನ್ನು ಇನ್ನಷ್ಟು ತಿದ್ದುಕೊಂಡು ಮುಂದಿನ ವರ್ಷ ಉತ್ತಮಪಡಿಸಲಾಗುವುದು. ಹಾಸನಾಂಬೆ ಇತಿಹಾಸವನ್ನು ಭರತ ಖಂಡದಲ್ಲಿ ತಾಯಿ ಶಕ್ತಿ ಬಗ್ಗೆ ತೋರಿಸಲಾಗುವುದು. ಪಕ್ಷ ಬೇದ ಮರೆತು ಹಾಸನ ಜಿಲ್ಲೆಯ ಜನತೆ ಮಾಡಿ ತೋರಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ಹಾಸನಾಂಬೆ ಜಾತ್ರೆಯ ಯಶಸ್ವಿಗೆ ದುಡಿದ ಎಲ್ಲಾರಿಗೂ ಅಭಿನಂದನೆ ತಿಳಿಸುತ್ತೇನೆ. ಈ ಬಾರಿಯಲ್ಲಿ ಹೆಚ್ಚು ಭಕ್ತರು ಆಗಮಿಸಿದ್ದು, ಎಲ್ಲಾರ ಬದುಕನ್ನು ಸಂತೃಪ್ತಿ, ಕೀರ್ತಿ, ನೆಮ್ಮದಿಯನ್ನು ಕೊಡಲಿ ಎಂದು ತಾಯಿಯನ್ನು ಕೋರುತ್ತೇನೆ ಎಂದು ತಿಳಿಸಿದರು. ದಕ್ಷಿಣ ವಲಯದ ಐಜಿ ಬೋರಲಿಂಗಯ್ಯ ಅವರು ಮಾತನಾಡಿ ಹಾಸನಾಂಬ ಜಾತ್ರಾ ಮಹೋತ್ಸವ ಹಾಸನದ ದಸರಾ ಇದ್ದಂತೆ, ೨೦೨೨ ರವರಿಗೆ ಸ್ಥಳೀಯ ಅಧಿಕಾರಿಗಳು ಮಾತ್ರ ಬಂದು ಬಸ್ತು ನೋಡಿಕೊಳ್ಳುತ್ತಿದ್ದರು. ೨೦೨೩ ರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಿ ದರ್ಶನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ಬಾರಿ ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಮತ್ತಿತರ ಅಧಿಕಾರಿಗಳು ಸೇರಿದಂತೆ ಒಟ್ಟು ೨೦೦೦ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವ ಮೂಲಕ ದೇವಿಯ ಸೇವೆ ಮಾಡುವ ಅವಕಾಶ ದೊರೆತಿದೆ ಎಂದು ತಿಳಿಸಿದರು. ಜನದಟ್ಟಣೆ ನಿಭಾಯಿಸುವ ಸಂದರ್ಭದಲ್ಲಿ ಸಹಜವಾಗಿ ಸಣ್ಣಪುಟ್ಟ ತಳ್ಳಾಟಗಳು ನಡೆಯುತ್ತಿವೆ. ಇದನ್ನು ಯಾರು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರಲ್ಲದೆ, ರಾಜ್ಯದ ಜನತೆಗೆ ಹಾಸನಾಂಬ ಒಳ್ಳೆಯದು ಮಾಡಲಿ ಎಂದರು. ಉಪವಿಭಾಗಧಿಕಾರಿ ಮಾರುತಿ ಮಾತನಾಡಿ, ೨೦೨೪ರ ಹಾಸನಾಂಬೆ ದೇವಿ ದರ್ಶನ ಭಾನುವಾರ ವಿದ್ಯುಕ್ತವಾಗಿ ತೆರೆ ಕಂಡಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಜನಪ್ರತಿನಿಧಿಗಳು, ಎಲ್ಲಾ ಅಧಿಕಾರಿಗಳು, ಎಲ್ಲಾ ಮಾಧ್ಯಮದವರು ಹಾಗೂ ಸಂಘ ಸಂಸ್ಥೆಗಳಿಗೂ ಧನ್ಯವಾದಗಲ ತಿಳಿಸುತ್ತೇನೆ. ಹಾಸನಾಂಬೆ ದರ್ಶನದ ಎರಡು ವರ್ಷದ ಅನುಭವ ನನಗೆ ಆಗಿದೆ. ಯಾವುದು ಬೇಕು ಬೇಡ ಎನ್ನುವ ಅನುಭವ ಬಂದಿದೆ ಎಂದರು. ಹಿಂದಿಗಿಂದಲೂ ಹಾಸನಾಂಬೆ ದರ್ಶನ ಸುಧಾರಿಸಿದೆ. ಜವಬ್ಧಾರಿಯಿಂದ ಇನ್ನಷ್ಟು ಮಾಡಲು ಮುಂದಾಗಲಾಗುವುದು. ಮುಂದಿನ ವರ್ಷ ಅಕ್ಟೋಬರ್ ೯ ರಿಂದ ಅಕ್ಟೋಬರ್ ೨೩ರ ವರೆಗೂ ಇರುತ್ತದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ತಹಸೀಲ್ದಾರ್ ಗಳಾದ ಶ್ವೇತಾ, ಮಮತ, ಮೇಘನಾ ಇತರರು ಉಪಸ್ಥಿತರಿದ್ದರು.