Home ದೇಶ ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಘನತೆಯನ್ನು ಹಾಳು ಮಾಡಿದ್ದಾರೆ: ಪ್ರಿಯಾಂಕ ಗಾಂಧಿ ಟೀಕೆ

ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಘನತೆಯನ್ನು ಹಾಳು ಮಾಡಿದ್ದಾರೆ: ಪ್ರಿಯಾಂಕ ಗಾಂಧಿ ಟೀಕೆ

0

ಹೊಸದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 140 ಕೋಟಿ ಜನರಿಗೆ ನಿರಂತರವಾಗಿ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

ಕಾಂಗ್ರೆಸ್ ಕಪೋಲಕಲ್ಪಿತ ಭರವಸೆಗಳನ್ನು ನೀಡುತ್ತಿದೆ ಎಂಬ ಪ್ರಧಾನಿ ಮೋದಿಯವರ ಕಾಮೆಂಟ್‌ಗಳಿಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಹಾತ್ಮಾ ಗಾಂಧೀಜಿಯವರು ಸತ್ಯವು ದೈವಿಕವೆಂದು ಹೇಳುತ್ತಾರೆ. ಮಂಡೂಕ ಉಪನಿಷತ್ತಿನಲ್ಲಿ ಸತ್ಯಮೇವ ಜಯತೇ ಎಂದು ಬರೆಯಲಾಗಿದೆ. ಅದು ನಮ್ಮ ರಾಷ್ಟ್ರೀಯ ಧ್ಯೇಯ. ಈ ಘೋಷಣೆಯು ಸತ್ಯವನ್ನು ಹೇಳುತ್ತದೆ. ಇದು ಭಾರತದ ಸ್ವಾತಂತ್ರ್ಯ, ದೇಶದ ಪುನರ್ ನಿರ್ಮಾಣ ಹಾಗೂ ಜನಜೀವನಕ್ಕೆ ಆದರ್ಶಪ್ರಾಯವಾಗಿದೆ’ ಎಂದು ಅವರು ಹೇಳಿದ್ದಾರೆ.

ಸಾವಿರಾರು ವರ್ಷಗಳಿಂದ ಸತ್ಯವನ್ನೇ ಆಧಾರವಾಗಿ ಸಂಸ್ಕೃತಿಯನ್ನು ಹೊಂದಿರುವ ದೇಶದಲ್ಲಿ ಉನ್ನತ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ಸುಳ್ಳು ಹೇಳಬಾರದು ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದರು. ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಗ್ಯಾರೆಂಟಿಗಳನ್ನು ಜಾರಿಗೊಳಿಸುವ ಮೂಲಕ ಭರವಸೆಗಳನ್ನು ಈಡೇರಿಸಿವೆ ಎಂದು ಹೇಳಿದರು.

100 ದಿನಗಳ ಯೋಜನೆ, ವರ್ಷಕ್ಕೆ 2 ಕೋಟಿ ಉದ್ಯೋಗ, 100 ಸ್ಮಾರ್ಟ್ ಸಿಟಿ, ಕಪ್ಪುಹಣ ವಾಪಸು, ಹಣದುಬ್ಬರ, ನಿರುದ್ಯೋಗ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ, ಡಾಲರ್‌ ಬೆಲೆ ಇಳಿಕೆ, ಅಚ್ಛೇದಿನ್‌ ತರುವುದಾಗಿ ಹೇಳಿದ್ದ ಮೋದಿ ಅದರಲ್ಲಿ ಯಾವುದನ್ನು ಜಾರಿಗೊಳಿಸಿದ್ದಾರೆ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಸಂವಿಧಾನ ರಕ್ಷಣೆಯೇ ಪ್ರಮುಖ ಹೋರಾಟ: ರಾಹುಲ್ ಗಾಂಧಿ

ಸಂವಿಧಾನ ರಕ್ಷಣೆಯೇ ದೇಶದ ಪ್ರಮುಖ ಹೋರಾಟ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಸಹೋದರಿ ಪ್ರಿಯಾಂಕಾ ಅವರನ್ನು ಬೆಂಬಲಿಸಿ ವಯನಾಡಿನ ಮಾನಂತವಾಡಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ತನ್ನ ತಂದೆ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ವ್ಯಕ್ತಿಯನ್ನು ಅಪ್ಪಿಕೊಂಡ ಪ್ರಿಯಾಂಕಾ, ನಳಿನಿ ಅವರನ್ನು ನೋಡಿ ತನಗೆ ನೋವಾಯಿತು ಎಂದು ಹೇಳಿದ್ದಾರೆ. ಬ್ರಿಟಿಷರ ವಿರುದ್ಧ ವರ್ಷಗಟ್ಟಲೆ ಜೈಲು ವಾಸ ಅನುಭವಿಸಿದವರು ವಿನಯ, ಪ್ರೀತಿಯಿಂದ ಸಂವಿಧಾನ ಬರೆದಿದ್ದಾರೆ. ಅವರ್ಯಾರೂ ದ್ವೇಷ, ಸಿಟ್ಟಿನಿಂದ ಸಂವಿಧಾನ ಬರೆದಿಲ್ಲ ಎಂದರು. ಹಾಗಾಗಿ ಪ್ರೀತಿ, ವಾತ್ಸಲ್ಯದಿಂದ ಕೂಡಿದ ರಾಜಕಾರಣ ಇಂದಿನ ಅಗತ್ಯ ಎಂದು ರಾಹುಲ್‌ ಹೇಳಿದರು.

You cannot copy content of this page

Exit mobile version