Home ಆರೋಗ್ಯ ಬಾಲ್ಯದಲ್ಲಿ ಸಕ್ಕರೆ ಸೇವನೆ ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ದೂರವಿಡಬಹುದು!

ಬಾಲ್ಯದಲ್ಲಿ ಸಕ್ಕರೆ ಸೇವನೆ ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ದೂರವಿಡಬಹುದು!

0

ಹೊಸದಿಲ್ಲಿ: ಮಗುವಿನ ಜೀವನದ ಮೊದಲ 1,000 ದಿನಗಳಲ್ಲಿ ಸಕ್ಕರೆಯನ್ನು ನಿಯಂತ್ರಿಸುವುದು ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮಹಿಳೆಯು ಗರ್ಭಧರಿಸಿದ ಸಮಯದಿಂದ ಎರಡು ವರ್ಷಗಳವರೆಗೆ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು, ನಂತರದ ಜೀವನದಲ್ಲಿ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ.

‘ಸೈನ್ಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆರಂಭಿಕ ಜೀವನದಲ್ಲಿ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ಟೈಪ್-2 ಮಧುಮೇಹದ ಅಪಾಯವನ್ನು ಶೇಕಡಾ 35ರಷ್ಟು ಮತ್ತು ರಕ್ತದೊತ್ತಡವನ್ನು ಶೇಕಡಾ 20ರಷ್ಟು ಕಡಿಮೆ ಮಾಡಬಹುದು. ಇವುಗಳು ತಮ್ಮ ಬರುವಿಕೆಯನ್ನು ವಿಳಂಬಗೊಳಿಸಬಹುದು. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯವು ನಡೆಸಿದ ಈ ಅಧ್ಯಯನದ ಪ್ರಕಾರ, ಸಕ್ಕರೆಯನ್ನು ಕಡಿತಗೊಳಿಸಿ ನೋಡಿದಾಗ ಮಕ್ಕಳಲ್ಲಿ ಸ್ಥೂಲಕಾಯತೆಯ ಅಪಾಯ ಶೇಕಡಾ 30ರಷ್ಟು ಕಡಿಮೆಯಾಗಿತ್ತು.

ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳ ಪ್ರಕಾರ, ಎರಡು ವರ್ಷದೊಳಗಿನ ಮಕ್ಕಳು ಸಂಸ್ಕರಿತ ಸಕ್ಕರೆಯನ್ನು ಸೇವಿಸಬಾರದು. ವಯಸ್ಕರು ಏಳು ಚಮಚಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು. ಯಾವುದೇ ಸಂದರ್ಭದಲ್ಲಿ ನೀವು 12 ಟೀಚಮಚಗಳಿಗಿಂತ ಹೆಚ್ಚು ಅಥವಾ 50 ಗ್ರಾಂಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು.

You cannot copy content of this page

Exit mobile version