Home ಬ್ರೇಕಿಂಗ್ ಸುದ್ದಿ ಹಾಸನ ಲಂಚ ಪಡೆಯುವ ವೇಳೆ ಅಕೌಂಟ್ ಹಾಗೂ ಎಫ್‌ಡಿಎ ಲೋಕಾಯುಕ್ತ ಬಲೆಗೆ

ಹಾಸನ ಲಂಚ ಪಡೆಯುವ ವೇಳೆ ಅಕೌಂಟ್ ಹಾಗೂ ಎಫ್‌ಡಿಎ ಲೋಕಾಯುಕ್ತ ಬಲೆಗೆ

0

ಹಾಸನ : ನಗರದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಬಲೆಗೆ ಬೀಳಿಸಿದ್ದಾರೆ. ನಗರದ ಎನ್.ಆರ್.ವೃತ್ತದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರ್ ಕಚೇರಿಯ ಅಕೌಂಟ್‌ ಸೂಪರಿಡೆಂಟ್ ರಾಮಚಂದ್ರು ಹಾಗೂ ಎಫ್‌ಡಿಎ ಲತಾ ಎಂಬವರು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಕಾಮಗಾರಿ ಬಿಲ್ ಮಂಜೂರಾತಿಗಾಗಿ ಬೇಲೂರಿನ ಶಶಿ ಎಂಬುವವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು, ತಲಾ ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಇನ್ಸ್‌ಪೆಕ್ಟರ್‌ಗಳು ಚಂದ್ರಶೇಖರ್ ಮತ್ತು ಶಿಲ್ಪಾ ಅವರ ನೇತೃತ್ವದಲ್ಲಿ ದಾಳಿ ನಡೆಯಿತು. ಬಳಿಕ ಲಂಚದ ಹಣದ ಸಮೇತ ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.

You cannot copy content of this page

Exit mobile version