ಕಾರ್ಮಿಕರ ಮೇಲಾಗುವ ಶೋಷಣೆಯ ವ್ಯವಸ್ಥೆಯನ್ನು ನಾವು ಕೊನಾಗಾಣಿಸಬೇಕಾದರೆ ಇಂತಹ ಹೋರಾಟವನ್ನು, ಚಳವಳಿಗಳನ್ನು ಇನ್ನಷ್ಟು ಬೇರೆ ರೀತಿಯಲ್ಲಿ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ ಹೇಮಲತಾ ಹೇಳಿದರು.
ಹಾಸನದಲ್ಲಿ 13, 14, 15 ಒಟ್ಟು ಮೂರು ದಿನಗಳ ಕಾಲ ಸಿಐಟಿಯು ವತಿಯಿಂದ 16ನೇ ರಾಜ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇವಲ ಕಾರ್ಮಿಕರ ಬೋನಸ್‌ಗಾಗಿ, ಹಕ್ಕುಗಳಿಗಾಗಿ, ತುಟ್ಟಿಭತ್ಯೆಗಾಗಿ, ಕಾರ್ಮಿಕರ ಬೇಡಿಕೆಗಾಗಿ ಹೋರಾಟ ನಡೆಸುವುದು ಸಿಐಟಿಯು ಉದ್ದೇಶವಲ್ಲ. ಇವತ್ತಿನ ಶೋಷಣಾ ವ್ಯವಸ್ಥೆಯನ್ನು ತೊಲಗಿಸಬೇಕು ಎಂಬುದೇ ಸಿಐಟಿಯುನ ಸಾಂವಿಧಾನಿಕ ಹೋರಾಟವಾಗಿದೆ” ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಹೇಮಲತಾ ತಿಳಿಸಿದರು.
“ನಿಮ್ಮೆಲ್ಲರಿಗೂ ಗೊತ್ತಿರುವಂತೆ 18ನೇ ಅಖಿಲ ಭಾರತ ಸಮ್ಮೇಳನ ಡಿಸೆಂಬರ್‌ನಿಂದ ಜನವರಿ 4ರವರೆಗೆ ರಾಷ್ಟ್ರ ಸಮ್ಮೇಳನ ನಡೆಯುತ್ತಿದೆ. ಅದರಂತೆ ಪ್ರತಿ ರಾಜ್ಯಗಳಲ್ಲಿಯೂ ನಡೆಯುತ್ತಿರುವ ರಾಜ್ಯ ಸಮ್ಮೇಳನಗಳ ಭಾಗವಾಗಿ ಇಂದು ಕರ್ನಾಟಕ ರಾಜ್ಯ ಸಮ್ಮೇಳನ ನಡೆಯುತ್ತಿದೆ” ಎಂದರು.
“ಕರ್ನಾಟಕದಲ್ಲಿಯೂ ಹಲವಾರು ಐತಿಹಾಸಿಕ ಹೋರಾಟಗಳನ್ನು ನಡೆಸಿರುವ ಅನುಭವವಿದೆ. ಪ್ಲಾಂಟೇಶನ್ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಫ್ಯಾಕ್ಟರಿ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರ ಹೋರಾಟ ಸೇರಿದಂತೆ ಅಸಂಘಟಿತ ಕಾರ್ಮಿಕರ ಹೋರಾಟಗಳನ್ನು ನಡೆಸಲಾಗಿದೆ. ಈ ಹೋರಾಟಗಳಿಂದ ನಾವು ಏನ್ನು ಅರಿತಿದ್ದೇವೆ, ಈ ಹೋರಾಟಗಳು ಸಂವಿಧಾನಾತ್ಮಕವಾಗಿ ನಡೆದಿವೆಯೇ ಎಂಬುದನ್ನು ನಾವು ವಿಮರ್ಶೆ ಮಾಡಬೇಕಿದೆ” ಎಂದು ಹೇಳಿದರು.
ಪ್ಲಾಂಟೇಶನ್ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಫ್ಯಾಕ್ಟರಿ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ನೇತೃತ್ವ ವಹಿಸಿರುವ ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಕಾರ್ಯದರ್ಶಿ ಕೆ ಎನ್ ಉಮೇಶ್, ರಾಜ್ಯ ಉಪಾಧ್ಯಕ್ಷ ವಿಜೆಕೆ ನಾಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಅಧ್ಯಕ್ಷತೆ ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮಿ, ಸ್ವಾಗತ ಎಚ್ ಎನ್ ಪರಮಶಿವಯ್ಯ ಸೇರಿದಂತೆ ಇತರ ಮುಖಂಡರು ಇದ್ದರು.
