Home ರಾಜ್ಯ ಶಿವಮೊಗ್ಗ ಹಾಸನ ಕಾಮಕಾಂಡ: ಸರ್ಕಾರಿ ತನಿಖೆಗೆ ಒತ್ತಾಯಿಸಿದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌

ಹಾಸನ ಕಾಮಕಾಂಡ: ಸರ್ಕಾರಿ ತನಿಖೆಗೆ ಒತ್ತಾಯಿಸಿದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌

0

ಶಿವಮೊಗ್ಗ: ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಹರಿದಾಡುತ್ತಿರುವ ಹಾಸನ ಮೂಲದ ಯುವ ರಾಜಕಾರಣಿಯದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಈಗ ರಾಜಕಾರಣಿಯೊಬ್ಬರ ಅಧಿಕೃತ ಹೇಳಿಕೆಯೊಂದಿಗೆ ಮುಖ್ಯವಾಹಿನಿ ಮಾಧ್ಯಮಕ್ಕೂ ಪ್ರವೇಶ ಪಡೆದಿದೆ.

ಈ ಕುರಿತು ಮಾತನಾಡಿರುವ ಶಿವಮೊಗ್ಗದ ಹಿರಿಯ ರಾಜಕಾರಣಿ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಅವರು ಸರ್ಕಾರ ಕೂಡಲೇ ಮುಂದೆ ಬಂದು ಸದರಿ ವಿಡಿಯೋಗಳ ಕುರಿತು ತನಿಖೆ ಮಾಡಿಸಬೇಕು ಎಂದಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “ಹಾಸನ ಭಾಗದಲ್ಲಿ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದರ ಯುವ ರಾಜಕಾರಣಿ ನೂರಾರು ಬಡ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ್ದಾನೆ ಎಂಬ ಸುದ್ಧಿಗಳು ಹೊರಬರುತ್ತಿವೆ. ಇದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಹದ್ದು. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಒಂದು ವಾರವಿದೆ ಎನ್ನುವಾಗ ಹೊರಬಿದ್ದ ಈ ವಿಡಿಯೋಗಳು ರಾಜಕೀಯ ವಲಯದಲ್ಲಿ ತಲ್ಲಣವನ್ನೇ ಎಬ್ಬಿಸಿದ್ದವು. ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋಗಳ ಸ್ಕ್ರೀನ್‌ಶಾಟ್‌ಗಳು ಓಡಾಡಿದ್ದವು. ಈ ಪ್ರಕರಣದ ಸುತ್ತ ಗಂಭೀರ ಮತ್ತು ತಮಾಷೆಯ ಎಂದರೆ ಟ್ರೋಲ್‌ ಮಾದರಿಯ ಚರ್ಚೆಗಳೂ ಏರ್ಪಟ್ಟಿದ್ದವು.

ಈ ವಿಷಯವಾಗಿ ಮುಂದುವರೆದು ಮಾತನಾಡಿದ ಮಂಜುನಾಥ್‌ ಅವರು, “‘ಈಗ ಎಲ್ಲ ಕಡೆಯೂ ಹಾಸನ ಭಾಗದ ಆ ರಾಜಕಾರಣಿಯ ಲೈಂಗಿಕ ಹಗರಣದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆತನಬಲೆಗೆ ಬಿದ್ದವರು ಬಡವರು, ಮುಸುರೆ ತಿಕ್ಕಲು ಬಂದವರು ಇದ್ದಾರೆ. ಅಷ್ಟೇ ಅಲ್ಲ, ಮಹಿಳಾ ಪೊಲೀಸರೊಬ್ಬರನ್ನು ಕೂಡ ಇದಕ್ಕೆ ಬಳಸಿಕೊಳ್ಳಲಾಗಿದೆ. ಅನ್ಯಾಯಕ್ಕೊಳಗಾದ ಹೆಣ್ಣುಮಕ್ಕಳು ಅಸಹಾಯಕರಾಗಿರುವುದರಿಂದ ದೂರು ನೀಡಲು ಕೂಡ ಅವರು ಭಯ ಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಬೇಕು” ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾವು ಭಾರತಮಾತೆಯ ರಕ್ಷಕರು ಎಂದು ಸದಾ ಕೊಚ್ಚಿಕೊಳ್ಳುವ ಬಿಜೆಪಿ ಈ ಹಗರಣದ ಕುರಿತಾಗಿ ತುಟಿ ಎರಡು ಮಾಡದಿರುವುದು ಅದರ ಡೋಂಗಿ ದೇಶಭಕ್ತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ರಾಜಕೀಯ ಲಾಭಕ್ಕಾಗಿ ಬಿಜೆಪಿ ಹೆಣ್ಣುಮಕ್ಕಳ ಮಾನದ ವಿಷಯದಲ್ಲಿ ಬಾಯಿಬಿಡದೆ ಕುಳಿತಿರುವುದು ಅದರ ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದಿದ್ದಾರೆ.

ಶಿವಮೊಗ್ಗದಲ್ಲೂ ಹಿಂದೂ ಹುಲಿ ಅನ್ನಿಸಿಕೊಂಡ ಈಶ್ವರಪ್ಪ ಕೂಡ ಹಾಸನದಲ್ಲಿ ನೂರಾರು ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಸುಮ್ಮನಿದ್ದಾರೆ ಎಂದು ಅವರು ಕುಟುಕಿದರು.

ಘಟನೆಯ ಗಂಭೀರತೆಯನ್ನು ಅರಿತು ಸರ್ಕಾರ ಈ ಕೂಡಲೇ ಲೈಂಗಿಕ ಹಗರಣದಲ್ಲಿ ಒಂದಷ್ಡು ಒಪ್ಪಿತ, ಇನ್ನೊಂದಷ್ಟು ಬಲವಂತಕ್ಕೆ ಕಟ್ಟುಬಿದ್ದ ಸಂಬಂಧಗಳೇ ಇರಬಹುದು. ಆದರೆ ಖಾಸಗಿ ದೃಶ್ಯಗಳನ್ನು ವಿಡಿಯೊ ಚಿತ್ರೀಕರಿಸಿ ಇಟ್ಟುಕೊಳ್ಳಬಹುದೇ. ಇದರಿಂದ ಆಯಾ ಹೆಣ್ಣುಮಕ್ಕಳ ಕುಟುಂಬಗಳು ಸಾಮಾಜಿಕವಾಗಿ ಅಪಮಾನ ಅನುಭವಿಸಬೇಕಿದೆ. ಏನಾದರೂ ಅನಾಹುತಗಳು ಘಟಿಸಿದರೆ ಯಾರು ಜವಾಬ್ದಾರಿ?” ಎಂದು ಅವರು ಪ್ರಶ್ನಿಸಿದರು.

You cannot copy content of this page

Exit mobile version