ಹಾಸನ: ರಾಜ್ಯ ಸರ್ಕಾರವು ನೈಸ್ (NICE) ಕಂಪನಿಗೆ ಸಂಪೂರ್ಣವಾಗಿ ಶರಣಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್ ತೀರ್ಪು ಬಂದು ಒಂದು ತಿಂಗಳು ಕಳೆದರೂ ನೈಸ್ ಸಂಸ್ಥೆಯ ಅಕ್ರಮ ಚಟುವಟಿಕೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಸರ್ಕಾರ ಸಂಪೂರ್ಣವಾಗಿ ಅವರ ಮುಂದೆ ಶರಣಾಗಿದೆ. ಕಾದು ನೋಡೋಣ ಮುಂದೇನು ಮಾಡುತ್ತಾರೆಂದು,” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
