Home ರಾಜ್ಯ ಹಾಸನ ಸಕಲೇಶಪುರದಲ್ಲಿ ಅಚೀವರ್ಸ್ ಪ್ರಜ್ಞಾ ಕಾಲೇಜಿನ ಮೇಲುಗೈ : ತಾಲೂಕಿನ ಮೊದಲ 7 ಸ್ಥಾನಗಳನ್ನೂ ಕೈಸೇರಿಸಿದ ವಿದ್ಯಾರ್ಥಿಗಳು

ಸಕಲೇಶಪುರದಲ್ಲಿ ಅಚೀವರ್ಸ್ ಪ್ರಜ್ಞಾ ಕಾಲೇಜಿನ ಮೇಲುಗೈ : ತಾಲೂಕಿನ ಮೊದಲ 7 ಸ್ಥಾನಗಳನ್ನೂ ಕೈಸೇರಿಸಿದ ವಿದ್ಯಾರ್ಥಿಗಳು

0

ಸಕಲೇಶಪುರ: ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಸಕಲೇಶಪುರ ತಾಲೂಕಿನ ಅಚೀವರ್ಸ್ ಪ್ರಜ್ಞಾ ಕಾಲೇಜು ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದೆ. ಕಾಲೇಜಿನ ವಿದ್ಯಾರ್ಥಿಗಳು ತಾಲೂಕಿನ ಮೊದಲ ಏಳು ಸ್ಥಾನಗಳನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡು ಅಪೂರ್ವ ಸಾಧನೆ ಮೆರೆದಿದ್ದಾರೆ.

ಈ ಬಾರಿ 95 ಶೇಕಡಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಅನೇಕ ವಿದ್ಯಾರ್ಥಿಗಳು ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಮಿಥಾಲಿ ವಿ ಅವರು 588 ಅಂಕಗಳೊಂದಿಗೆ ತಾಲೂಕು ಪ್ರಥಮ ಸ್ಥಾನ ಪಡೆದಿದ್ದು, ಶುಭಾ ಬಿ.ಎಚ್ ಅವರು 587 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಮತ್ತು ಸಫ್ರೀನಾ ಅವರು 586 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅಲ್ಫಿಯಾ ಎಚ್‌.ಐ ಅವರು 587 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಫೈಝಿಯಾ ಮುಸ್ಕಾನ್, ಮೊಹಮ್ಮದ್ ರಯಾನ್ ಹಾಗೂ ಮಲೀಹಾ ಅಶ್ಫಾಖ್ ಅವರು ತಲಾ 577 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ತೋರಿದ್ದಾರೆ. ದೀಪಾ ಕೆ.ಬಿ ಅವರು 582 ಅಂಕಗಳೊಂದಿಗೆ ನಾಲ್ಕನೇ ಸ್ಥಾನ, ಕಿಶನ್ ಜಿ ಅವರು 581 ಅಂಕಗಳೊಂದಿಗೆ ಐದನೇ ಸ್ಥಾನ, ಸಿದ್ರಾ ಖಾನಮ್ ಅವರು 580 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದಿದ್ದಾರೆ. ಫಾತಿಮಾ ಶೈಮಾ ಎ.ಎಂ ಹಾಗೂ ಮೇಘನಾ ಹೆಚ್‌.ಸಿ ಅವರು ತಲಾ 577 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದಿದ್ದಾರೆ.

ಇನ್ನಿತರ ವಿದ್ಯಾರ್ಥಿಗಳಲ್ಲೂ ಮಿಸ್ಬಾ ತನ್ಝೀಮ್ (575), ತಸ್ಮಿಯಾ (574), ರಂಜಿತಾ ಆರ್ (572), ಮುಝೈಫಾ ತಾಜ್ (572), ಎಸ್‌.ಡಿ ಭವಾನಾ (571) ಮತ್ತು ವರ್ಷಾ ಬಿ.ಪಿ (570) ಉತ್ತಮ ಅಂಕಗಳನ್ನು ಗಳಿಸಿದ್ದಾರೆ.

ಒಟ್ಟಾರೆ 56 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಕಾಲೇಜಿನ ಹೆಗ್ಗಳಿಕೆಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಪೋಷಕರ ಸಹಕಾರ ಹಾಗೂ ವಿದ್ಯಾರ್ಥಿಗಳ ಪರಿಶ್ರಮವೇ ಈ ಯಶಸ್ಸಿನ ಹಿಂದೆ ಪ್ರಮುಖ ಕಾರಣವೆಂದು ತಿಳಿಸಿದ್ದಾರೆ.

You cannot copy content of this page

Exit mobile version