Home ಬ್ರೇಕಿಂಗ್ ಸುದ್ದಿ ನಟ ದರ್ಶನ್‌ಗೆ ಮತ್ತೆ ನಿರಾಸೆ; ಕನಿಷ್ಟ ಸೌಲಭ್ಯ ಬೇಡಿಕೆಯ ಅರ್ಜಿ ವಿಚಾರಣೆ ಅಕ್ಟೋಬರ್ 9 ಕ್ಕೆ...

ನಟ ದರ್ಶನ್‌ಗೆ ಮತ್ತೆ ನಿರಾಸೆ; ಕನಿಷ್ಟ ಸೌಲಭ್ಯ ಬೇಡಿಕೆಯ ಅರ್ಜಿ ವಿಚಾರಣೆ ಅಕ್ಟೋಬರ್ 9 ಕ್ಕೆ ಮುಂದೂಡಿಕೆ

0

ಹಾಸಿಗೆ ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ನೀಡುವಂತೆ ಕೋರ್ಟ್‌ನ ಮೊರೆ ಹೋಗಿದ್ದ ನಟ ದರ್ಶನ್‌ಗೆ ಕೋರ್ಟ್ ನಿರಾಸೆ ಮೂಡಿಸಿದೆ. ಅರ್ಜಿ ವಿಚಾರಣೆ ಬಳಿಕ ಅಕ್ಟೋಬರ್ 9ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.

ಇದರ ಜೊತೆಗೇ ನಟ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಿಂದ ಕೈಬಿಡುವಂತೆ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 57 ಕೋರ್ಟ್ ಗೆ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಕನಿಷ್ಠ ಸೌಲಭ್ಯದ ಕೋರಿಕೆಯ ವಿಚಾರಣೆಗೆ ಕೋರ್ಟ್ ಗೆ ಬಂದಿದ್ದ ದರ್ಶನ್ ಗೆ ಜಡ್ಜ್ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ಕೊಲೆ ಆರೋಪಿ ದರ್ಶನ್ ಗೆ ಜಡ್ಜ್ ಜೈಲಿನ ಅಧಿಕಾರಿಗಳು ಆದೇಶ ಪಾಲಿಸುತ್ತಿದ್ದಾರ ಎಂದು ಪ್ರಶ್ನಿಸಿದರು. ಆಗ ಇಲ್ಲ ಸರ್ ಯಾವ ಆದೇಶಗಳನ್ನು ಸಹಪಾಲಿಸುತ್ತಿಲ್ಲ. 25/3 ಫೀಟ್ ಮಾತ್ರ ಓಡಾಡಲು ಅವಕಾಶ ಕೊಟ್ಟಿದ್ದಾರೆ ವಾಕಿಂಗ್ ಮಾಡಲು ಸೂರ್ಯನ ಬೆಳಕು ಬರುತ್ತಿಲ್ಲ ಎಂದು ಆರೋಪಿ ದರ್ಶನ್ ಜಡ್ಜ್ ಗೆ ತಿಳಿಸಿದರು.

ಪವಿತ್ರ ಗೌಡ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. 20 ಬಾರಿ ಕೌಟ್ ಆರ್ಡರ್ ಕೇಳುತ್ತಾರೆ. ಇದು ಗುಂಡರಾಜ್ಯವೇ ಕೋರ್ಟ್ ಆರ್ಡರ್ ಗೆ ಮಾನ್ಯತೆ ನೀಡುತ್ತಿಲ್ಲ. ಜೈಲು ಅಧಿಕಾರಿಗಳ ವಿರುದ್ಧ ದರ್ಶನ್ ಪರವಾಗಿ ಆರೋಪ ಮಾಡಿದರು. ಈ ವೇಳೆ ಅಕ್ಟೋಬರ್ 9ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿತು.

You cannot copy content of this page

Exit mobile version