ಲೋಕಸಭೆಯಲ್ಲಿ ಸೋಮವಾರ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ನಡುವೆ ಹಿಂದೂ ಧರ್ಮದ ಬಗ್ಗೆ ತೀವ್ರ ಮಾತಿನ ಚಕಮಕಿ ನಡೆಯಿತು.
ಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ರಾಹುಲ್ ಕರೆದಿದ್ದಾರೆ ಎಂದು ಮೋದಿ ಮತ್ತು ಶಾ ಆರೋಪಿಸಿದರೆ, ಅದಕ್ಕೆ ಉತ್ತರವಾಗಿ ರಾಹುಲ್ “ಬಿಜೆಪಿ, ಮೋದಿ ಎಂದರೆ ಸಂಪೂರ್ಣ ಹಿಂದೂ ಸಮಾಜವಲ್ಲ” ಎಂದು ಹೇಳಿದರು.
“ಹಿಂದೂ ಧರ್ಮವೆಂದರೆ ಭಯ, ದ್ವೇಷ ಮತ್ತು ಸುಳ್ಳುಗಳನ್ನು ಹರಡುವುದಲ್ಲ” ಲೋಕಸಭೆಯಲ್ಲಿ ರಾಹುಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಗದ್ದಲ ಪ್ರಾರಂಭವಾಯಿತು.
ಎಲ್ಲಾ ಧರ್ಮಗಗಳೂ ಧೈರ್ಯದ ಬಗ್ಗೆ ಮಾತನಾಡುತ್ತವೆ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳನ್ನು ಉಲ್ಲೇಖಿಸಿ, ಅವು ನಿರ್ಭಯತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ ಎಂದು ಕಾಂಗ್ರೆಸ್ ನಾಯಕ ಒತ್ತಿ ಹೇಳಿದರು.
ಪ್ರಧಾನಿ ಮೋದಿಯವರು ರಾಹುಲ್ ಭಾಷಣಕ್ಕೆ ಅಡ್ಡಿಪಡಿಸಿದ ನಂತರ, ಷಾ ವಿರೋಧಪಕ್ಷ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.