ಅಖಿಲ ಭಾರತ ಹಿಂದೂ ಮಹಾಸಭಾ ಗುರುವಾರ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನವರಿ 30, 1948 ರಂದು ದೆಹಲಿಯಲ್ಲಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ವ್ಯಕ್ತಿ ನಾಥೂರಾಂ ಗೋಡ್ಸೆಯನ್ನು ಗೌರವಿಸಿತು ಎಂದು ಪಿಟಿಐ ವರದಿ ಮಾಡಿದೆ.
ಅಮರ್ ಹುತಾತ್ಮ ನಾಥುರಾಮ್ ಗೋಡ್ಸೆ ನಾನಾ ಆಪ್ಟೆ ಧಾಮ್‌ನಲ್ಲಿ ಗಾಂಧಿಯನ್ನು ಹತ್ಯೆಗೈದ ಗೋಡ್ಸೆಯನ್ನು ಗೌರವಿಸಲು ಹಿಂದುತ್ವ ಗುಂಪಿನ ಸದಸ್ಯರು ಸೇರಿದ್ದರು.
ಮಹಾಸಭಾದ ಮುಖಂಡ ಅಶೋಕ್ ಶರ್ಮಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸ್ ಪೂಜೆ ಮತ್ತು ಪಠಣ ಮಾಡಲಾಯಿತು.
ಸಮಾರಂಭದಲ್ಲಿ, ಶರ್ಮಾ ಅವರು ಮಹಾತ್ಮ ಗಾಂಧಿಯವರ “ರಾಷ್ಟ್ರಪಿತ” ಬಿರುದನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದರು ಮತ್ತು ಗಾಂಧಿಯವರ ಹತ್ಯೆಗೆ ಸಂಬಂಧಿಸಿರುವ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರ ಕುಟುಂಬಗಳನ್ನು ಗೌರವಿಸುವ ಯೋಜನೆಯನ್ನು ಘೋಷಿಸಿದರು.
ಗಾಂಧಿಯನ್ನು ರಾಷ್ಟ್ರಪಿತ ಎಂದು ವ್ಯಾಪಕವಾಗಿ ಕರೆಯಲಾಗಿದ್ದರೂ, ಅವರಿಗೆ ಭಾರತ ಸರ್ಕಾರವು ಔಪಚಾರಿಕವಾಗಿ ಆ ಬಿರುದು ನೀಡಲಿಲ್ಲ ಮತ್ತು ಈ ನಿಟ್ಟಿನಲ್ಲಿ ಯಾವುದೇ ನಿಯಮ ಅಥವಾ ಆದೇಶವನ್ನು ಜಾರಿಗೊಳಿಸಲಾಗಿಲ್ಲ ಎಂದು ಕೇಂದ್ರವು 2020 ರಲ್ಲಿ ಹೇಳಿತ್ತು.
2012 ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಗಾಂಧಿಗೆ ಔಪಚಾರಿಕವಾಗಿ “ರಾಷ್ಟ್ರಪಿತ” ಎಂಬ ಬಿರುದನ್ನು ನೀಡಲಾಗುವುದಿಲ್ಲ, ಏಕೆಂದರೆ ಸಂವಿಧಾನವು ಶೈಕ್ಷಣಿಕ ಅಥವಾ ಮಿಲಿಟರಿ ಪದಗಳನ್ನು ಹೊರತುಪಡಿಸಿ ಬೇರೆ ಬಿರುದಾಂಕಿತಗಳನ್ನು ಅನುಮತಿಸುವುದಿಲ್ಲ ಎಂದು ಹೇಳಿತ್ತು .
ಹಿಂದೂ ಮಹಾಸಭಾವು ನವೆಂಬರ್ 15, 1949 ರಂದು ಗೋಡ್ಸೆ ಮತ್ತು ಆಪ್ಟೆಯನ್ನು ಗಲ್ಲಿಗೇರಿಸಿದ ದಿನ ನವೆಂಬರ್ 15 ನ್ನು ಪ್ರತಿ ವರ್ಷ “ಬಲಿದಾನ್ ದಿವಸ್” ಎಂದು ಆಚರಿಸುತ್ತದೆ.
ಗುರುವಾರ ನಡೆದ ಸಮಾರಂಭವು “ಕರಮಚಂದ್ ಗಾಂಧಿಯವರ ಆತ್ಮವನ್ನು ಮತ್ತು ಭಾರತದಿಂದ ಗಾಂಧಿವಾದವನ್ನು,” ತೊಡೆದುಹಾಕುವ ಗುರಿಯನ್ನು ಹೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಈ ಹಿಂದುತ್ವ ಸಂಘಟನೆಯು ಭಾರತದ ವಿಭಜನೆಗೆ ಗಾಂಧಿಯನ್ನು ಹೊಣೆಗಾರರನ್ನಾಗಿಸುತ್ತದೆ.
2019 ರಲ್ಲಿ, ಉತ್ತರ ಪ್ರದೇಶ ಪೊಲೀಸರು ಗಾಂಧಿ ಹತ್ಯೆಯನ್ನು ಅಭಿನಯಿಸಿ ತೋರಿಸಿದ ಕಾರಣ ಪಾಂಡೆ ಮತ್ತು ಆತನ ಪತ್ನಿಯನ್ನು ಬಂಧಿಸಿದರು. ಇವರ ಮರಣ ವಾರ್ಷಿಕೋತ್ಸವವನ್ನು “ಶೌರ್ಯ ದಿವಸ್” ಅಥವಾ ಶೌರ್ಯ ದಿನ ಎಂದು ಆಚರಿಸಿದ್ದರು. 2018 ರಲ್ಲಿ, ಗಾಂಧಿ ಹಂತಕನ ಗೌರವಾರ್ಥ ಮೀರತ್ ಅನ್ನು ಗೋಡ್ಸೆ ನಗರ ಎಂದು ಮರುನಾಮಕರಣ ಮಾಡುವಂತೆ ಸಂಘಟನೆಯು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಒತ್ತಾಯಿಸಿತ್ತು.