ಚಾಮುಂಡೇಶ್ವರಿಗೆ ಅವಹೇಳನ ಮಾಡಿದ್ದಕ್ಕಾಗಿ ರಕ್ಷಕ್ ಬುಲೆಟ್ ಎಂಬ ಯುವಕನ ಮೇಲೆ ಹಿಂದುಪರ ಸಂಘಟನೆಗಳು ದೂರು ನೀಡಲು ಮುಂದಾಗಿವೆ.
ಕನ್ನಡದ ಖಾಸಗಿ ವಾಹಿನಿಯೊಂದು ನಡೆಸಿದ್ದ ಬಿಗ್ ಬಾಸ್ ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಈತನ ವಿರುದ್ಧ ಇಂದು ನಗರ ಪೊಲೀಸ್ ಆಯುಕ್ತರಿಗೆ ಹಿಂದು ಸಂಘಟನೆಗಳು ದೂರು ಸಲ್ಲಿಸಲಿವೆ. ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಬಗ್ಗೆ ಅವಹೇಳನಕಾರಿ ರಕ್ಷಕ್ ಬುಲೆಟ್ ಮಾತನಾಡಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಸಹಸ್ಪರ್ಧಿಯನ್ನು ಹೊಗಳುತ್ತಾ ಈತ “ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕಿಕೊಂಡು ಸ್ವಿಟ್ಜರ್ಲೆಂಡ್ ನಲ್ಲಿ ಟ್ರಿಪ್ ಹೊಡೆಯುತ್ತಿದ್ದಾಳೆ ಎನಿಸುತ್ತಿದೆ,” ಎಂಬ ಡೈಲಾಗ್ ಹೇಳಿದ್ದಾನೆ. ಇದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಹಿಂದು ಸಂಘಟನೆಗಳು ಕಮಿಷನರ್‌ಗೆ ದೂರು ನೀಡಲು ಮುಂದಾಗಿದ್ದಾರೆ.