ಸಕಲೇಶಪುರ: ಯಸಳೂರು ಹೋಬಳಿ ಹೇರೂರು ಗ್ರಾಮದಲ್ಲಿ ಕಾಫಿ ತೋಟವೊಂದರಲ್ಲಿ ಸಿಲ್ವರ್ ಮರಗಳನ್ನು ಕತ್ತರಿಸಿ ನಾಶ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಶೋಭಾ ಹೆತ್ತೂರು ಎಂಬುವರಿಗೆ ಸೇರಿದ ಮರಗಳನ್ನು ದುಷ್ಕರ್ಮಿಗಳು ಕಡಿದು ತೋಟಕ್ಕೆ ಹಾನಿ ಮಾಡಿದ್ದಾಗಿ ಯಸಳೂರು ಠಾಣೆಗೆ ದೂರು ನೀಡಲಾಗಿದೆ. ಧರ್ಮಪ್ಪ, ಶರತ್ ಮತ್ತು ಭರತ್ ಎಂಬವರು ಹಲವು ವರ್ಷಗಳಿಂದ ಬೆಳೆದಿದ್ದ ಮರಗಳನ್ನು ಕಡಿದು ನಾಶಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದ. ಹಾನಿಗೊಳಾದ ಮರಗಳ ಮೌಲ್ಯವನ್ನು ಸುಮಾರು ₹3 ಲಕ್ಷ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ, ಆರೋಪಿಗಳು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶೋಭಾ ದೂರಿದ್ದಾರೆ. ಘಟನೆಯ ಕುರಿತು ಪೊಲೀಸರು ಪಡೆದು, ತನಿಖೆ ಮುಂದುವರಿಸಿದ್ದಾರೆ.
