ಬೆಂಗಳೂರು : ಕಾಡು ಪ್ರಾಣಿಗಳ (Wild animals) ಅಟ್ಟಹಾಸ ಮಿತಿಮೀರಿದೆ. ಕಾಡಂಚಿನ ಪ್ರದೇಶದಲ್ಲಿ (Forest) ವನ್ಯಜೀವಿ ಹಾಗೂ ಮಾನವನ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದ್ದು, ಅನೇಕ ಜೀವಗಳು ಬಲಿಯಾಗಿದೆ.
ಕರ್ನಾಟಕದಲ್ಲಿ ಮಾನವ-ಪ್ರಾಣಿ ಸಂಘರ್ಷ ಗಣನೀಯವಾಗಿ ಹೆಚ್ಚಿದ್ದು, 2022 ರಿಂದ 2025 ರ ನವೆಂಬರ್‌ವರೆಗೆ 203 ಜನರ ಸಾವಿಗೆ ಕಾರಣವಾಗಿದೆ. ಚಾಮರಾಜನಗರ, ಕೊಡಗು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಕಾಡುಪ್ರಾಣಿ ದಾಳಿಗಳು ಹೆಚ್ಚಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಜಿಲ್ಲೆಗಳಲ್ಲಿ ಕಾಡು ಪ್ರಾಣಿಗಳ ದಾಳಿ ಹೆಚ್ಚಿದ್ದು, ಸಾವಿಗೀಡಾದವರ ಅಂಕಿ ಅಂಶಗಳ ಪಟ್ಟಿ ಬಹಿರಂಗವಾಗಿದೆ.
ಸುಮಾರು 60% ರಷ್ಟು ಸಾವುಗಳು ಮಾನವ-ವನ್ಯಜೀವಿ ಸಂಘರ್ಷಣೆಯಿಂದಲೇ ಸಂಭವಿಸಿವೆ ಎಂದು ಹೇಳಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿರುವಂತೆ, 2022 ರಿಂದ 2025 ರವರೆಗೆ ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷದಲ್ಲಿ 203 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ 2022-23 ರಲ್ಲಿ 58 ಮಂದಿ, 2023-24 ರಲ್ಲಿ 65, 2024-25 ರಲ್ಲಿ 46 ಸೇರಿದಂತೆ 2025 ರ ನವೆಂಬರ್‌ವರೆಗೆ 34 ಜನರು ಸಾವನ್ನಪ್ಪಿದ್ದಾರೆ.ಲ್ ಎಂಬ ಅಂಕಿ ಅಂಶ ನೀಡಲಾಗಿದೆ.
ವಾಸಸ್ಥಾನಗಳ ವಿಂಗಡಣೆ, ಕುಗ್ಗುತ್ತಿರುವ ಅರಣ್ಯ ಕಾರಿಡಾರ್‌ಗಳು, ಕೃಷಿ ವಿಸ್ತರಣೆ ಮತ್ತು ವನ್ಯಜೀವಿ ವಾಸಸ್ಥಾನಗಳಲ್ಲಿ ಮಾನವ ಅತಿಕ್ರಮಣದಂತಹ ಕಾರಣದಿಂದ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ
ಎಂಬ ವಿಶ್ಲೇಷಣೆ ಕೇಳಿಬಂದಿದೆ.
