ತುಮಕೂರು : ತುಮಕೂರಲ್ಲಿ (Tumakuru) ವನ್ಯ ಜೀವಿ ಹಾಗೂ ಮಾನವನ ಸಂಘರ್ಷ ಮುಂದುವರಿದಿದ್ದು,ಮಹಿಳೆ ಮೇಲೆ ಚಿರತೆ (Leapord ) ಅಟ್ಯಾಕ್ ಆಗಿ ಮಹಿಳೆ ಸ್ಥಳದಲ್ಲೇ ಸಾವು ಸಂಭವಿಸಿದೆ.
ಸುಜಾತ (46) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಅರೇಮಲ್ಲೇನಹಳ್ಳಿ ಹೊರವಲಯದ ಬೆಟ್ಟದ ಬಳಿ ಘಟನೆ ನಡೆದಿದೆ. ಅರೆಮಲ್ಲೆನಹಳ್ಳಿ ಗ್ರಾಮದ ಸುಜಾತ ನಿನ್ನೆ ಸಂಜೆ ತೋಟಕ್ಕೆ ತೆರಳಿದ್ರು.ಈ ವೇಳೆ ಅಟ್ಯಾಕ್ ಮಾಡಿರುವ ಚಿರತೆ ತಲೆ ಭಾಗವನ್ನ ಸಂಪೂರ್ಣವಾಗಿ ತಿಂದು ಹಾಕಿದೆ.
ತೀವ್ರ ರಕ್ತಸ್ರಾವದಿಂದ ಸುಜಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ತುರುವೇಕೆರೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು,ಚಿರತೆ ದಾಳಿಗೆ ಮಹಿಳೆ ಬಲಿ ಕೇಸ್ ಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಕ್ಕೆ ೫ ಲಕ್ಷ ರೂ. ತಾತ್ಕಾಲಿಕ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ.
ಸೋಮವಾರವಾದ ಇವತ್ತು 5 ಲಕ್ಷ ರೂ.ಗಳ ತಾತ್ಕಾಲಿಕ ಪರಿಹಾರದ ಚೆಕ್ ಅನ್ನು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ವಿತರಿಸಿದರು. ಮೃತರಿಗೆ ಒಬ್ಬ ಮಗ ಹಾಗೂ ಮಗಳಿದ್ದು, ಸೋಮವಾರ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಉಳಿದ 15 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಮುಂದಿನ ಎರಡು ವಾರಗಳಲ್ಲಿ ಪಾವತಿಸಲಾಗುವುದು
ಎಂದು ಭರವಸೆ ನೀಡಿದರು. ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುರುವೇಕೆರೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಉಪವಿಭಾಗ ಮಟ್ಟದಲ್ಲಿ ಚಿರತೆ ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ವಿಶೇಷ ‘ಟಾಸ್ಕ್ ಫೋರ್ಸ್’ ಸಮಿತಿ ರಚಿಸಿ, ದಾಳಿ ನಡೆದ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ಬೀಡು ಬಿಟ್ಟು, ಕೂಡಲೇ ಚಿರತೆಯನ್ನು ಸೆರೆ ಹಿಡಿಯಲು ವ್ಯಾಪಕ ಕೂoಬಿoಗ್ ನಡೆಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
