ಅಡಿಲೈಡ್ ಓವಲ್: ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದಲ್ಲಿ ಭಾರತ ಐದು ರನ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶವು, ಮೊದ-ಮೊದಲು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸಿತು. ಈ ವೇಳೆ ರನ್ ಗಳಿಸಲು ಪರದಾಡಿದ ರೋಹಿತ್ ಶರ್ಮಾ 2 ರನ್‌ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಜೊತೆಗೂಡಿ ತಮ್ಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ, ಇಬ್ಬರು ಆಟಗಾರರು ಅರ್ಧ ಶತಕಗಳಿಸಿ, ಬಾಂಗ್ಲಾದೇಶದ ಬೌಲರ್‌ಗಳಿಗೆ ನೀರು ಕುಡಿಸಿದರು.
ನಂತರ ಬಂದ ಸೂರ್ಯ ಕುಮಾರ್ ಯಾದವ್ ರಭಸದ ಆಟವಾಡುವ ಮೂಲಕ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನೀಡಿ 184 ರನ್‌ಗಳಿಸಿತು.
ನಂತರ ಮಳೆಯ ಕಾರಣದಿಂದಾಗಿ ಮೊಟಕುಗೊಂಡ ಪಂದ್ಯ 16 ಓವರ್ ಗಳಿಗೆ ಸೀಮಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಬಾಂಗ್ಲಾದೇಶವು 16 ಓವರ್‌ಗಳಿಗೆ 151 ರನ್ ಗಳಿಸಬೇಕಾಗಿತ್ತು. ಈ ವೇಳೆ ಭಾರತೀಯ ಬೌಲರ್‌ಗಳ ದಾಳಿಗೆ ರನ್ ಗಳಿಸಲು ಪರದಾಡಿದ ಬಾಂಗ್ಲಾ ಆಟಗಾರರು, 16 ಓವರ್‌ಗಳಿಗೆ 6 ವಿಕೆಟ್ ನೀಡಿ 145 ರನ್ ಗಳಿಸಿದರು. ಈ ಮೂಲಕ ಭಾರತ ತಂಡವು 5 ರನ್‌ಗಳ ಜಯ ಸಾಧಿಸಿ, ಸೆಮಿಪೈನಲ್ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಸಫಲವಾಯಿತು.