ಮೊದಲು ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬೇಕು ಎನ್ನುವ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಒಂದು ವೇಳೆ ಕಾಂಗ್ರೆಸ್ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸದೆ, ಕ್ಷಮಾಪಣಾ ಅರ್ಜಿ ಬರೆಯುತ್ತಾ ಕೂತಿದ್ದರೆ ನೀವು ಇಂದೂ ಬ್ರಿಟಿಷರ ಗುಲಾಮರಾಗಿಯೇ ಇರಬೇಕಿತ್ತು. ನೆನಪಿರಲಿ…,” ಎಂದು ಕುಟುಕಿದ್ದಾರೆ. ಇದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ಮತ್ತೆ ತಾರಕಕ್ಕೇರುವ ನಿರೀಕ್ಷೆಯಿದೆ.
ನಲವತ್ತು ಪರ್ಸೆಂಟ್ ಮತ್ತು PAYCM ವಿಷಯಗಳು PFI ನಿಷೇಧಗೊಂಡ ನಂತರ ಆ ಚರ್ಚೆ ಮುನ್ನೆಲೆಗೆ ಬಂದು ಬಿಜೆಪಿ ನಿಟ್ಟುಸಿರುಬಿಟ್ಟಿತ್ತು. ಈಗ ಬಿಜೆಪಿ ಅಧ್ಯಕ್ಷರ ಹೇಳಿಕೆಯೊಂದಿಗೆ ಇನ್ನೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದಂತಾಗಿದೆ.