ಛತ್ತೀಸ್‌ಗಢ: ಇಲ್ಲಿಯ ಬಿಲಾಸ್‌ಪುರದಲ್ಲಿ ಮಾತನಾಡಿದ ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಅವರು ನಾವು ರಸ್ತೆ, ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದರೆ ಅದನ್ನು ಬಿಜೆಪಿಯವರು ಮಾತ್ರ ಬಳಸುತ್ತಾರೆಯೇ ಎಂದು ಜನರನ್ನು ಉದ್ದೇಶಿಸಿ ಹೇಳಿದರು.
ನೀವು ಬಿಜೆಪಿ ಅಥವಾ ಕಾಂಗ್ರೆಸ್ ಅನ್ನು ನೋಡಬೇಡಿ, ನಿಮ್ಮ ಬಗ್ಗೆ ಯಾರು ಯೋಚಿಸುತ್ತಿದ್ದಾರೆ ಎನ್ನುವುದನ್ನು ನೋಡಿ ಮತ್ತು ಬಿಜೆಪಿ ಆ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಇನ್ನು ಮಾತು ಮುಂದುವರೆಸಿದ ಅವರು, ನಾವು ಈಗ ಅವಕಾಶವನ್ನು ಪಡೆದಿದ್ದೇವೆ, ಆದ್ದರಿಂದ ನಮಗೆ ಬೆಂಬಲ ನೀಡಿ, ನಾವು ಎಲ್ಲರಿಗೂ ಕೆಲಸ ಮಾಡುತ್ತೇವೆ ಎಂದು ನಾನು ಕಾಂಗ್ರೆಸ್ ಬೆಂಬಲಿಗರಿಗೆ ಹೇಳುತ್ತೇನೆ ಎಂದರು.