Home ಹವಾಮಾನ ಮೇ ತಿಂಗಳಲ್ಲೇ ಮುಂಗಾರು ಆರಂಭದ ಸಾಧ್ಯತೆ: ಐಎಂಡಿ ಘೋಷಣೆ

ಮೇ ತಿಂಗಳಲ್ಲೇ ಮುಂಗಾರು ಆರಂಭದ ಸಾಧ್ಯತೆ: ಐಎಂಡಿ ಘೋಷಣೆ

0

ಈ ತಿಂಗಳ ಆರಂಭದಲ್ಲಿ ನೈಋತ್ಯ ಮಾನ್ಸೂನ್ ದೇಶವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ತಿಂಗಳ 13ರಂದು ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಮೂಲಕ ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಘೋಷಿಸಲಾಗಿದೆ.

ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳದ ಮೇಲೆ ಉತ್ತರದ ಕಡೆಗೆ ಚಲಿಸಿ ಜುಲೈ 15 ರ ವೇಳೆಗೆ ದೇಶಾದ್ಯಂತ ಹರಡುತ್ತದೆ, ಆದರೆ ಈ ವರ್ಷ ಇದು ಜೂನ್ 1 ರ ವೇಳೆಗೆ ಕೇರಳ ಕರಾವಳಿಯನ್ನು ತಲುಪಿ ಜುಲೈ 11 ರ ವೇಳೆಗೆ ದೇಶಾದ್ಯಂತ ಹರಡುವ ಸಾಧ್ಯತೆಯಿದೆಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂದರೆ ನಿರೀಕ್ಷೆಗಿಂತ ಮೊದಲೇ. ಐಎಂಡಿ ಪ್ರಕಾರ, ಮೇ 25ರ ವೇಳೆಗೆ ಮಾನ್ಸೂನ್ ಕೇರಳ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ.

You cannot copy content of this page

Exit mobile version