ಚೆನ್ನೈ, ಆಗಸ್ಟ್ 21: ಡಿಎಂಕೆ ಸಂಸ್ಥಾಪಕ ಎಂ ಕರುಣಾನಿಧಿ ಅವರ ಶತಮಾನೋತ್ಸವದ ಸಂಭ್ರಮಾಚರಣೆ ತಮಿಳುನಾಡು ರಾಜ್ಯದಲ್ಲಿ ಹೊಸ ರಾಜಕೀಯ ವೇದಿಕೆ ಸೃಷ್ಟಿಯಾಗುವ ಬಗ್ಗೆ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನಿರೀಕ್ಷಿತವಾಗಿ ದಿವಂಗತ ನಾಯಕ ಕರುಣಾನಿಧಿಯ ಬಗ್ಗೆ ಪ್ರಶಂಸೆಯ ಸುರಿಮಳೆಗೈದರು.
ಡಿಎಂಕೆ ನಾಯಕರೂ ಹೊಗಳದ ರೀತಿಯಲ್ಲಿ ರಾಜನಾಥ್ ನಮ್ಮ ಪಕ್ಷದ ನಾಯಕನನ್ನು ಹೊಗಳಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ. ಆದರೆ, ರಾಜನಾಥ್ ಅವರ ಈ ಹೊಗಳಿಕೆಯಿಂದ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ಹೊಸ ಮೈತ್ರಿಗೆ ಕಾರಣವಾಗಲಿದೆ ಎಂಬ ಊಹಾಪೋಹಗಳು ಶುರುವಾಗಿವೆ.
ಸ್ಟಾಲಿನ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದು, ಡಿಎಂಕೆ ಹಲವು ವರ್ಷಗಳಿಂದ ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದು ಈ ಬಾರಿ ಬಿಜೆಪಿ ಜತೆ ಕೈಜೋಡಿಸಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಆದರೆ ಇಲ್ಲಿಯವರೆಗೆ ಡಿಎಂಕೆಯ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ 2026ರ ವಿಧಾನಸಭಾ ಚುನಾವಣೆಯಲ್ಲೂ ತಮ್ಮ ಸಂಬಂಧ ಮುಂದುವರಿಯಲಿದೆ ಎಂಬ ವಿಶ್ವಾಸದಲ್ಲಿದೆ.