ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇದೇ 19ರಂದು ನಡೆಯಲಿದೆ. 102 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದರೆ, 42 ಸ್ಥಾನಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಈ ಹಂತದಲ್ಲಿ 1,625 ಮಂದಿ ಸ್ಪರ್ಧಿಸಿದ್ದರೆ, ಅವರಲ್ಲಿ 1,618 ಮಂದಿಯ ಅಫಿಡವಿಟ್‌ಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿದೆ.
ಇದರ ಪ್ರಕಾರ ಮೊದಲ ಹಂತದಲ್ಲಿ ಸ್ಪರ್ಧಿಸಿರುವ ಶೇ.28ರಷ್ಟು ಮಂದಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದಾರೆ. ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ ರೂ.4.51 ಕೋಟಿ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ.
ಆರ್‌ಜೆಡಿಯ ನಾಲ್ವರು ಕೋಟ್ಯಧಿಪತಿ, ಎಐಎಡಿಎಂಕೆಯ 35, ಡಿಎಂಕೆಯ 21, ಬಿಜೆಪಿಯ 69, ಕಾಂಗ್ರೆಸ್‌ನ 49, ತೃಣಮೂಲ ಕಾಂಗ್ರೆಸ್‌ನ 4 ಮತ್ತು ಬಿಎಸ್‌ಪಿಯ 18 ಅಭ್ಯರ್ಥಿಗಳು ಕೋಟ್ಯಧಿಪತಿ.
ಅತಿ ಹೆಚ್ಚು ಆಸ್ತಿ ಘೋಷಿಸಿದವರಲ್ಲಿ ಮಧ್ಯಪ್ರದೇಶದ ನಕುಲನಾಥ್ (ಕಾಂಗ್ರೆಸ್, 716 ಕೋಟಿ ರೂ.) ಮೊದಲ ಸ್ಥಾನದಲ್ಲಿದ್ದಾರೆ. ಅಶೋಕ್ ಕುಮಾರ್ (ಅಣ್ಣಾ ಡಿಎಂಕೆ, 662 ಕೋಟಿ ರೂ.) ಮತ್ತು ದೇವನಾಥನ್ ಯಾದವ್ (ಬಿಜೆಪಿ, 304 ಕೋಟಿ ರೂ.) ನಂತರದ ಸ್ಥಾನಗಳಲ್ಲಿದ್ದಾರೆ.