ನವದೆಹಲಿ: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆರ್ಥಿಕತೆಯಲ್ಲಿ ಸೇನೆಯ ವ್ಯವಸ್ಥಾಪನವು ಒಂದು ಮಹತ್ವದ ಅಂಶವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸೇನಾ ಲಾಜಿಸ್ಟಿಕ್ಸ್ ಸಮ್ಮೇಳನದಲ್ಲಿ ಮಾತನಾಡಿದ ಅವರು ಇಂದು ವಿಶ್ವದಲ್ಲಿಯೇ ಭಾರತವು 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ ಮತ್ತು ನಾವು 5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿದ್ದೇವೆ ಎಂದರು. 21 ಶತಮಾನದ ಪ್ರಕಾರ ಲಾಜಿಸ್ಟಿಕ್ಸ್ ವಿಮರ್ಶೆ ಮತ್ತು ಸುಧಾರಣೆಗಳು ಬಹಳಷ್ಟು ಅಗತ್ಯವಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.