ಅಸ್ಸಾಂ: ಮೊರಿಗಾಂವ್ ಜಿಲ್ಲೆಯಲ್ಲಿ ಬಾಂಗ್ಲಾದೇಶದ ಇಸ್ಲಾಮಿಕ್ ಜಿಹಾದಿ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಮೊರಿಗಾಂವ್ ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಬಂಧಿತ ಭಯೋತ್ಪಾದಕರು ಮುಸಾದಿಕ್ ಹುಸೇನ್ ಮತ್ತು ಇಕ್ರಮುಲ್ ಇಸ್ಲಾಂ ಎಂದು ಗರುತಿಸಲಾಗಿದೆ ಎಂದು ಮೊರಿಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ಎನ್, ಮಾಹಿತಿ ನೀಡಿದ್ದಾರೆ.