ದೆಹಲಿ: ಪ್ಯಾಲೆಸ್ಟೈನ್ ದೇಶದ ಸ್ಥಾಪನೆಗಾಗಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್-ಪ್ಯಾಲೆಸ್ಟೈನ್ ನಡುವಿನ ಶಾಂತಿಯುತ ಪರಿಹಾರ ಮತ್ತು ‘ಎರಡು ರಾಷ್ಟ್ರಗಳ ಪರಿಹಾರ’ದ ಅನುಷ್ಠಾನದ ಕುರಿತು ನ್ಯೂಯಾರ್ಕ್ ಘೋಷಣೆಯನ್ನು ಅಂಗೀಕರಿಸುವ ನಿರ್ಣಯಕ್ಕೆ ಭಾರತ ಬೆಂಬಲಿಸಿ ಮತ ಚಲಾಯಿಸಿದೆ.
ಫ್ರಾನ್ಸ್ ಮಂಡಿಸಿದ ಈ ನಿರ್ಣಯಕ್ಕೆ ಅನಿರೀಕ್ಷಿತವಾಗಿ 142 ದೇಶಗಳು ಬೆಂಬಲ ನೀಡಿವೆ. ಎಲ್ಲಾ ಗಲ್ಫ್ ರಾಷ್ಟ್ರಗಳು ಇದರ ಪರವಾಗಿ ಮತ ಹಾಕಿದರೆ, ಇಸ್ರೇಲ್, ಅಮೆರಿಕ, ಅರ್ಜೆಂಟೀನಾ, ಹಂಗೇರಿ, ನಾರ್ವೆ, ಪಪುವಾ ನ್ಯೂ ಗಿನಿಯಾ, ಮತ್ತು ಟಾಂಗಾ ಸೇರಿದಂತೆ ಕೆಲವು ದೇಶಗಳು ವಿರೋಧಿಸಿವೆ.
ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಈ ಸಂದರ್ಭದಲ್ಲಿ 193 ಸದಸ್ಯರ ಸಾಮಾನ್ಯ ಸಭೆ ಖಂಡಿಸಿದೆ.
