ಚೆನ್ನೈ: ತ್ರಿಭಾಷಾ ನೀತಿಯನ್ನು ತೀವ್ರವಾಗಿ ವಿರೋಧಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಪ್ರಾಚೀನ ಭಾರತೀಯ ಮಾತೃಭಾಷೆಗಳನ್ನು ಹಿಂದಿ ನುಂಗಿಹಾಕಿದೆ ಎಂದು ಹೇಳಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭೋಜ್‌ಪುರಿ, ಅವಧಿ, ಬ್ರಜ್, ಬುಂದೇಲಿ, ಕುಮಾವೋನಿ, ಮಾಗಾಹಿ, ಮಾರ್ವಾರಿ, ಮಾಲ್ವಿ ಸಂತಾಲಿ, ಅಂಗಿಕಾ ಮತ್ತು ಗರ್ವಾಲಿ ಸೇರಿದಂತೆ ಹಲವು ಭಾರತೀಯ ಭಾಷೆಗಳನ್ನು ಹಿಂದಿ ನುಂಗಿ ಹಾಕಿದೆ. ಆ ಭಾಷೆಗಳು ಈಗ ಉಳಿವಿಗಾಗಿ ಹೆಣಗಾಡುತ್ತಿವೆ ಎಂದು ಹೇಳಿದ್ದಾರೆ.
ಹಿಂದಿ ಏಕಸ್ವಾಮ್ಯವು ಪ್ರಾಚೀನ ಭಾಷೆಗಳನ್ನು ಕೊಲ್ಲುತ್ತಿದೆ. ಬಿಹಾರ ಮತ್ತು ಉತ್ತರ ಪ್ರದೇಶ ಹಿಂದಿ ಭಾಷಿಕ ರಾಜ್ಯಗಳಾಗಿರಲಿಲ್ಲ. ಅವರ ನಿಜವಾದ ಭಾಷೆಗಳು ಈಗ ಗತಕಾಲದ ಅವಶೇಷಗಳಾಗಿವೆ. ಈ ಹಿಂದಿ ಹೇರಿಕೆಯು ಎಲ್ಲಿ ಅಂತ್ಯವಾಗುತ್ತದೆ ಎಂಬುದನ್ನು ತಿಳಿದೇ ಹಿಂದಿ ಹೇರಿಕೆ ವಿರೋಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ.