ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಅಂತಿಮ ಹಂತಕ್ಕೆ ಕಾಲಿಟ್ಟೆ. ಕೊನೆಯ ಎರಡು ಪಂದ್ಯಗಳು ಬಾಕಿ ಇದ್ದು ಸರಣಿ ಇನ್ನೂ ನಿರ್ಧಾರ ಆಗಿಲ್ಲ. ನಾಳೆಯೇ ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಇನ್ನು ಮೂರನೇ ಪಂದ್ಯದಲ್ಲಿ ರಿಟೈರ್ಡ್ ಹರ್ಟ್ ಆಗಿದ್ದ ನಾಯಕ ರೋಹಿತ್ ಶರ್ಮಾ ಅವರು ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಆಡಿಸುವ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ಯೋಚನೆ ಮಾಡುತ್ತಿದೆ.
ಅಮೆರಿಕಾದ ಫ್ಲೊರಿಡಾದಲ್ಲಿ ನಡೆಯಲಿರುವ ಇಂದಿನ ಪಂದ್ಯ ರೋಚಕವಾಗಿರುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ, ಕಳೆದಬಾರಿ ಅಂದರೆ 2016ರಲ್ಲಿ ಇಲ್ಲಿ ಭಾರತ ಮತ್ತು ವಿಂಡೀಸ್ ತಂಡಗಳ ನಡುವೆ ಪಂದ್ಯ ನಡೆದಾಗ ಮೊದಲ ಇನ್ನಿಂಗ್ಸ್ ನಲ್ಲಿ ವಿಂಡೀಸ್ 245 ರನ್ ಗಳಿಸಿತ್ತು. ಮತ್ತು ಭಾರೀ ಮೊತ್ತ ಚೇಸ್ ಮಾಡಿದ ಭಾರ ಎರಡನೇ ಇನ್ನಿಂಗ್ಸ್ ನಲ್ಲಿ 244 ರನ್ ಗಳಿಸಿ ಒಂದು ರನ್ನಿನಿಂದ ಸೋಲೊಪ್ಪಿಕೊಂಡಿತ್ತು. ಹಾಗಾಗಿ ಈಗಲೂ ಪಿಚ್ ಅದೇ ರೀತಿ ಇದ್ದರೆ, ಇವತ್ತು ಭಾರತ ಮತ್ತು ವೆಸ್ಟ್ ಇಂಡೀಸ್ ತಂಡದ ಆಟಗಾರರು ಬ್ಯಾಟಿಂಗ್ ಮಾಡುವುದನ್ನು ನೋಡೋದೇ ಒಂದು ಹಬ್ಬ ಆಗಬಹುದು. ಇನ್ನು ಅರ್ಶ್ ದೀಪ್ ಸಿಂಗ್, ಅಶ್ವಿನ್ ಅವರ ಬೋಲಿಂಗ್ ಗೆ ಇದು ಪರೀಕ್ಷೆ ಆಗಬಹುದು. ಹಾಗೆಯೇ, ಆಲ್ ರೌಂಡರ್ ದೀಪಕ್ ಹೂಡಾ ಅವರ ಆಟವನ್ನೂ ಇಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ನಿರೀಕ್ಷೆ ಮಾಡುತ್ತಿದ್ದಾರೆ ಅನ್ನೋದು ಕೂಡಾ ಸತ್ಯ.