ಬೆಂಗಳೂರು : ಇಸ್ರೋ ಇಂದು ರಾತ್ರಿ 12 ಗಂಟೆ 7 ಸೆಕೆಂಡ್ಗೆ ವೆಬ್ ಜಾಗತಿಕ ಸಂವಹನ ಜಾಲದ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.
ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) , ಇಂದು ರಾತ್ರಿ 12 ಗಂಟೆ 7 ಸೆಕೆಂಡ್ಗೆ ಒನ್ ವೆಬ್ ಜಾಗತಿಕ ಸಂವಹನ ಜಾಲದ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇಸ್ರೋದ ಅತಿಭಾರದ ರಾಕೆಟ್ ಎಲ್ವಿಎಂ – 3 ಮೂಲಕ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಕಾರ್ಯಾಚರಣೆ ನಡೆಯಲಿದೆ.
ಭಾರತದ ಅತೀ ಭಾರದ ವಾಣಿಜ್ಯಾತ್ಮಕ ಉಪಗ್ರಹ LVM3 ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ ಈ ಕಾರ್ಯಾಚರಣೆ ನಡೆಯಲಿದ್ದು, ಇದು ಭಾರತದ ಸಾರ್ವಜನಿಕ ವಲಯದ ಬಾಹ್ಯಾಕಾಶ ಸಂಸ್ಥೆ NSIL ನ ಉಪಗ್ರಹವಾಗಿದೆ.
NSIL ಇಂಗ್ಲೆಂಡ್ ಮೂಲದ ಜಾಗತಿಕ ಸಂವಹನ ಜಾಲ ಒನ್ ವೆಬ್ ನೊಂದಿಗೆ ಸಹಿ ಹಾಕಿದ್ದು, ಇದು ಒನ್ ವೆಬ್ ನ ಮೊದಲ ಉಡಾವಣೆಯಾಗಿದೆ.