ಹೊಸದಿಲ್ಲಿ, ಆ.21 (ಪಿಟಿಐ): ಆಂಧ್ರಪ್ರದೇಶದ ವಿದ್ಯುತ್ ಉತ್ಪಾದನಾ ನಿಗಮಕ್ಕಾಗಿ ಆಮದು ಮಾಡಿಕೊಂಡರುವ ಕಲ್ಲಿದ್ದಲು ಪೂರೈಕೆಯ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಅದಾನಿ ಎಂಟರ್‌ಪ್ರೈಸಸ್ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟದ (ಎನ್‌ಸಿಸಿಎಫ್) ಮಾಜಿ ಅಧ್ಯಕ್ಷರ ವಿರುದ್ಧದ ಪ್ರಕರಣ ದಾಖಲಾಗಿತ್ತು. ಈಗ ಸಿಬಿಐ ತನಿಖೆಯನ್ನು ಮುಕ್ತಾಯಗೊಳಿಸಿ ವರದಿ ಸಲ್ಲಿಸಿದೆ.
2020 ರಲ್ಲಿ ದಾಖಲಾದ ಈ ಪ್ರಕರಣದ ಕೊನೆಯ ವರದಿಯನ್ನು ಕೇಂದ್ರ ಸಂಸ್ಥೆ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇದರಲ್ಲಿ ಆಗಿನ ಎನ್‌ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕ ಜಿ ಪಿ ಗುಪ್ತಾ ಮತ್ತು ಹಿರಿಯ ಸಲಹೆಗಾರ ಎಸ್ ಸಿ ಸಿಂಘಾಲ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಈ ತನಿಖೆಯನ್ನು ಕೊನೆಗೊಳಿಸಬೇಕೇ, ಹೆಚ್ಚಿನ ತನಿಖೆಗಾಗಿ ಸಿಬಿಐಗೆ ನೀಡಬೇಕೇ ಅಥವಾ ಸದ್ಯ ಇರುವ ಆಧಾರಗಳ ಮೇಲೆ ವಿಚಾರಣೆ ಮುಂದುವರಿಸಬೇಕೇ ಎಂಬುದನ್ನು ವಿಶೇಷ ಸಿಬಿಐ ನ್ಯಾಯಾಲಯ ತೀರ್ಮಾಣಿಸಬೇಕಿದೆ.