ಬೇಲೂರು : ವಿಧಾನಸೌಧದಲ್ಲಿಂದು ಬೇಲೂರು ತಾಲ್ಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಹಾನಿಯಾಗಿರುವ ಬೆಳೆಗೆ ಪರಿಹಾರ ನೀಡುವಂತೆ ರಾಜ್ಯದ ಅರಣ್ಯ, ಜೈವಿಕ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಅವರಿಗೆ ಶಾಸಕ ಹೆಚ್,ಕೆ,ಸುರೇಶ್ ಅವರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ, ಬೇಲೂರು ವಿಧಾನಸಭಾ ಕ್ಷೇತ್ರದ ಬಿಕ್ಕೋಡು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಪ್ರದೇಶದಲ್ಲಿ ಕಾಡಾನೆಗಳು ಗುಂಪುಗಟ್ಟಿ ಹಾವಳಿ ಮಾಡುತ್ತಿದ್ದು, ಹುಲುಸಾಗಿ ಬೆಳೆದ ಧಾನ್ಯಗಳು, ವಾಣಿಜ್ಯ ಹಾಗೂ ಕಾಫಿ ತೋಟಗಳನ್ನು ನಾಶ ಮಾಡುತ್ತಿವೆ. ಶೀಘ್ರವೇ, ಆನೆಧಾಮವನ್ನು ಸ್ಥಾಪಿಸ ಬೇಕು. ರೈತರಿಗೆ ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು ಹಾಗೂ ಕಾಡಾನೆಯಿಂದ ಹಾನಿಯಾಗಿರುವ ರೈತರ ಬೆಳೆಗಳಿಗೆ ಪ್ರತಿ ಎಕರೆ ಶುಂಠಿಗೆ 2 ಲಕ್ಷ ರೂ., ಮೆಕ್ಕೆಜೋಳ ಬೆಳೆಗೆ 1.20 ಲಕ್ಷ ರೂ., ಅಡಿಕೆ ಬೆಳೆಗೆ 2 ಲಕ್ಷ ರೂ., ತೆಂಗು ಬೆಳೆಗೆ 1 ಲಕ್ಷ ರೂ., ಕಾಫಿ ಬೆಳೆಗೆ 2 ಲಕ್ಷ ರೂ. ಹಾಗೂ ಬಾಳೆ ಬೆಳೆಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ವಿನಂತಿಸಿಕೊಳ್ಳ ಲಾಯಿತು.