Home ವಿದೇಶ ಪಾಕ್ ಮಧ್ಯಸ್ಥಿಕೆ ಕುರಿತು ನಮಗೆ ನಂಬಿಕೆಯಿಲ್ಲ: ಇಸ್ರೇಲ್ ರಾಯಭಾರಿ

ಪಾಕ್ ಮಧ್ಯಸ್ಥಿಕೆ ಕುರಿತು ನಮಗೆ ನಂಬಿಕೆಯಿಲ್ಲ: ಇಸ್ರೇಲ್ ರಾಯಭಾರಿ

0

ಜೆರೂಸಲೆಂ: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆಯಾಗುತ್ತಿರುವ ಬೆನ್ನಲ್ಲೇ, ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೀವನ್ ಅಜರ್ ಅವರು ಪಾಕಿಸ್ತಾನದ ಕುರಿತು ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ಇಸ್ರೇಲ್ ನಂಬುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಾತುಕತೆಯ ಸಂದರ್ಭದಲ್ಲಿ ಉದ್ಭವಿಸುವ ಯಾವುದೇ ಪರಿಸ್ಥಿತಿಯನ್ನು ಬಗೆಹರಿಸಲು ನಾವು ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಅವಲಂಬಿತರಾಗಿದ್ದೇವೆ ಎಂದು ಅವರು ತಿಳಿಸಿದರು.

ಪಶ್ಚಿಮ ಏಷ್ಯಾದಲ್ಲಿ ಇರಾನ್ ಜೊತೆ ನಡೆಯುತ್ತಿರುವ ಯುದ್ಧದ ಕುರಿತು ಬುಧವಾರ ಮಹತ್ವದ ಘೋಷಣೆ ಹೊರಬಿದ್ದಿರುವುದು ಗಮನಾರ್ಹ. ಎರಡು ವಾರಗಳ ಕಾಲ ತಾತ್ಕಾಲಿಕ ಕದನ ವಿರಾಮ ಘೋಷಿಸಿರುವ ಅಮೆರಿಕ ಮತ್ತು ಇರಾನ್, ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗೆ ಸಿದ್ಧವಾಗುತ್ತಿವೆ. ಯುದ್ಧದ ಬಿಕ್ಕಟ್ಟಿನ ಕುರಿತು ಉಭಯ ರಾಷ್ಟ್ರಗಳ ನಡುವೆ ನಡೆಯಲಿರುವ ಮುಖಾಮುಖಿ ಚರ್ಚೆಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದೆ.

You cannot copy content of this page

Exit mobile version