ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದೆ. ಇತ್ತೀಚೆಗೆ, ಇಸ್ರೇಲ್ ಗಾಜಾದ ಮೇಲೆ ಮತ್ತೊಂದು ಉಗ್ರ ದಾಳಿಯನ್ನು ನಡೆಸಿತು.
ಈ ದಾಳಿಯಲ್ಲಿ 33 ಪ್ಯಾಲೆಸ್ತೀನಿಯರು ಸಾವಿಗೀಡಾಗಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 21 ಮಂದಿ ಮಹಿಳೆಯರು. ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಉತ್ತರ ಗಾಜಾದಲ್ಲಿರುವ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆದಿದೆ ಎಂದು ಗಾಜಾದ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಈ ದಾಳಿಯಲ್ಲಿ 33 ಮಂದಿ ಸಾವನ್ನಪ್ಪಿದ್ದು, ಇಸ್ರೇಲಿ ದಾಳಿಯಲ್ಲಿ ಇದುವರೆಗೆ ಸಾವನ್ನಪ್ಪಿದ ಪ್ಯಾಲೆಸ್ತೀನಿಯರ ಒಟ್ಟು ಸಂಖ್ಯೆ 42,500 ಕ್ಕೆ ಏರಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಇಸ್ರೇಲ್ ಗಾಜಾದಲ್ಲಿ ಒಂದೇ ಸಮನೆ ದಾಳಿ ನಡೆಸುತ್ತಿದೆ.