ವಾಷಿಂಗ್ಟನ್: ಇಸ್ರೇಲ್-ಹಮಾಸ್ ಯುದ್ದ ಸಂಘರ್ಷ ಮುಂದಿನ ಸೋಮವಾರ ನಿಲ್ಲುವ ವಿಶ್ವಾಸವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ನಾವು ಯುದ್ಧ ವಿರಾಮದ ವಾತಾವರಣಕ್ಕೆ ಬಯಸುತ್ತೇವೆ. ಅದು ಹತ್ತಿರವಾಗುತ್ತಿದೆ ಎಂದು ‘ನಾವು ಯುದ್ಧ ವಿರಾಮಕ್ಕೆ ಹತ್ತಿರವಾಗಿದ್ದೇವೆ ಎಂದು ನನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರರು ನನಗೆ ಹೇಳಿದ್ದಾರೆ. ಮುಂದಿನ ಸೋಮವಾರದ ವೇಳೆಗೆ ನಾವು ಕದನ ವಿರಾಮವನ್ನು ಹೊಂದುತ್ತೇವೆ ಎಂಬುದು ನನ್ನ ಭರವಸ ಎಂದು ಬೈಡನ್ ಹೇಳಿರುವುದಾಗಿ ವರದಿಯಾಗಿದೆ.
ಒತ್ತೆಯಾಳು ಒಪ್ಪಂದದ ಮಾತುಕತೆಯಲ್ಲಿ ತಾನು ಇಟ್ಟಿದ್ದ ಕೆಲವು ಪ್ರಮುಖ ಬೇಡಿಕೆಗಳನ್ನು ಹಮಾಸ್ ಹಿಂತೆಗೆದುಕೊಂಡಿದೆ. ಇದು ಯುದ್ಧ ವಿರಾಮದ ವಾತಾವರಣ ನಿರ್ಮಿಸಲು ಸಹಕಾರಿಯಾಯಿತು. ಪ್ಯಾರಿಸ್‌ನಲ್ಲಿ ಅಮೆರಿಕ, ಈಜಿಪ್ಟ್ ಮತ್ತು ಇಸ್ರೇಲಿ ಗುಪ್ತಚರ ಮುಖ್ಯಸ್ಥರು ಮತ್ತು ಕತಾರ್ ಪ್ರಧಾನ ಮಂತ್ರಿಗಳ ನಡುವೆ ನಡೆದ ಸಭೆಯ ನಂತರ ಮಾತನಾಡಿದ ಬೈಡನ್ ಆಡಳಿತದ ಅಧಿಕಾರಿಯೊಬ್ಬರು, ಇಸ್ರೇಲಿ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡು ಯುದ್ಧ ಅಂತ್ಯಗೊಳಿಸಬೇಕೆಂಬ ಹಮಾಸ್‌ನ ಪ್ರಮುಖ ಬೇಡಿಕೆಗಿದ್ದ ಅಡೆತಡೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ.
‘ಇಸ್ರೇಲ್ ಒತ್ತೆಯಾಳುಗಳಾಗಿರುವ ಕೆಲವು ಪ್ಯಾಲೆಸ್ಟೀನಿಯರನ್ನು ಬಿಡುಗಡೆ ಮಾಡಬೇಕೆಂಬ ಹಮಾಸ್ ಬೇಡಿಕೆ ತಿರಸ್ಕರಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.