ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಜ್ಲಿಸ್ ಪಕ್ಷದ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.
ಇದೊಂದು ರೀತಿಯ ಭಯೋತ್ಪಾದಕ ದಾಳಿಯಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲಿನ ಸರಕಾರದಿಂದಾಗಿ ಮಸೀದಿಗಳ ಮೇಲೆ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಶಿಂಧೆ-ಬಿಜೆಪಿ ಸರಕಾರ ಇಂತಹ ದಾಳಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದರು.
ಒಂದೆಡೆ ವಿಶ್ವಗುರುವಾಗಲು ಬಯಸಿ ಮತ್ತೊಂದೆಡೆ ಮಸೀದಿಗಳ ಮೇಲೆ ದಾಳಿ ನಡೆಸುತ್ತಿದ್ದೇವೆ ಎಂದು ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಮುಸ್ಲಿಮರು ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳು ನಡೆಯುತ್ತಿವೆ ಎಂದು ಟೀಕಿಸಿದರು. ‘ಇದು ಮಸೀದಿಗಳ ಮೇಲಿನ ಒಂದು ರೀತಿಯ ಭಯೋತ್ಪಾದಕ ದಾಳಿಯಾಗಿದೆ. ಅಲ್ಲಿ ಶಿಂಧೆ-ಫಡ್ನವೀಸ್ ಸರ್ಕಾರವಿದೆ’ ಎಂದು ಓವೈಸಿ ಹೇಳಿದರು.
“ಸರ್ಕಾರದಿಂದಾಗಿಯೇ ಮಹಾರಾಷ್ಟ್ರದಲ್ಲಿ ಇಂತಹ ದಾಳಿಗಳು ನಡೆಯುತ್ತಿವೆ. ಶಿಂಧೆ-ಬಿಜೆಪಿ ಸರಕಾರ ಇಂತಹ ದಾಳಿಗಳನ್ನು ಪ್ರೋತ್ಸಾಹಿಸುತ್ತಿದೆ. ಒಂದೆಡೆ, ನಾವು ವಿಶ್ವ ಗುರುವಾಗಲು ಬಯಸುತ್ತೇವೆ. ಆದರೆ ಇನ್ನೊಂದೆಡೆ ಮಸೀದಿಗಳನ್ನು ಕೆಡವಲಾಗುತ್ತಿದೆ. ಇದು ಖಂಡಿತವಾಗಿಯೂ ಮುಸ್ಲಿಮರು ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಗಳು” ಎಂದು ಅವರು ಆರೋಪಿಸಿದ್ದಾರೆ.