ಕರ್ನಾಟಕ ಜಾನಪದ ಅಕಾಡೆಮಿಯು 2024 ನೇ ಸಾಲಿನ ಜಾನಪದ ಲೋಕದಲ್ಲಿ ಸಾಧನೆ ಮಾಡಿದ ಕಲಾವಿದರ ಗುರುತಿಸಿ ಪ್ರಶಸ್ತಿ ಘೋಷಿಸಿದೆ. ಅದರಂತೆ ಜಾನಪದ ಕಲಾವಿದರಿಗೆ, ಜಾನಪದ ಕ್ಷೇತ್ರ ತಜ್ಞರು ಸೇರಿದಂತೆ 32 ಮಂದಿಯನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿಯ ಪಟ್ಟಿ ಹೊರಡಿಸಿದೆ.
ದಿನಾಂಕ:02-01-2025 ರಂದು ಬೆಂಗಳೂರಿನಲ್ಲಿ ನಡೆದ ಸರ್ವಸದಸ್ಯರ ಸಭೆಯ ತೀರ್ಮಾನದಂತೆ ಈ ಕೆಳಕಂಡ ಜಾನಪದ ಕಲಾವಿದರು ಮತ್ತು ತಜ್ಞರನ್ನು 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
2024 ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರು ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿ ನೀಡಲಾಗುವುದು. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ ರೂ.25,000/- ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ ರೂ.50,000/-ಗಳು ಹಾಗೂ ಪುಸ್ತಕ ಬಹುಮಾನಿತರಿಗೆ ತಲಾ ರೂ.25,000/- ಗಳ ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಜಾನಪದ ಅಕಾಡೆಮಿ ತಿಳಿಸಿದೆ.
ಜಾನಪದ ಗಾಯಕರು ವಿಭಾಗದಿಂದ ಡಾ. ಜೋಗಿಲ ಸಿದ್ಧರಾಜು, ತತ್ವಪದ ಮತ್ತು ಗೀಗೀಪದ ವಿಭಾಗದಿಂದ ಶ್ರೀ ಸಿದ್ದಯ್ಯ ಸಿ ಹೆಚ್, ಡೊಳ್ಳು ಕುಣಿತ ವಿಭಾಗದಿಂದ ಶ್ರೀ ಎಂ.ಮಹೇಶ್, ಕೋಲಾಟ ವಿಭಾಗದಿಂದ ಶ್ರೀಮತಿ ಸುನಂದಮ್ಮ, ಅರೆವಾದ್ಯ, ತಮಟೆ ವಿಭಾಗದಿಂದ ಶ್ರೀ ವೆಂಕಟರಮಣಪ್ಪ, ಕಿನ್ನರಿ ಜೋಗಿ ವಿಭಾಗದಿಂದ ಶ್ರೀ ಸಿದ್ದಪ್ಪ, ಭಜನೆ ವಿಭಾಗದಿಂದ ಶ್ರೀ ಮಾರ್ತಾಂಡಪ್ಪ, ಹಗಲು ವೇಷ ವಿಭಾಗದಿಂದ ಶ್ರೀ ಎ. ಶ್ರೀನಿವಾಸ, ಹಸೆ ಚಿತ್ತಾರ ವಿಭಾಗದಿಂದ ಶ್ರೀಮತಿ ಗೌರಮ್ಮ, ಚರ್ಮವಾದ್ಯ ನಗಾರಿ ವಿಭಾಗದಿಂದ ಶ್ರೀ ಸಿ. ಮಂಜುನಾಥ, ಜಾನಪದ ಗಾಯನ ವಿಭಾಗದಿಂದ ಶ್ರೀ ಹುರುಗಲವಾಡಿ ರಾಮಯ್ಯ, ಕೋಲಾಟ ವಿಭಾಗದಿಂದ ಶ್ರೀ ಬಿ.ಟಿ.ಮಾನವ, ಭಜನೆ ವಿಭಾಗದಿಂದ ಶ್ರೀ ಬಿ. ಪಿ ಪರಮೇಶ್ವರಪ್ಪ ಆಯ್ಕೆ ಆಗಿದ್ದಾರೆ.

ಇನ್ನುಳಿದಂತೆ ತಂಬೂರಿ ಪದ ವಿಭಾಗದಿಂದ ಶ್ರೀ ಸಿದ್ಧರಾಜು ಆರ್, ಪಾಡ್ದನ ವಿಭಾಗದಿಂದ ಶ್ರೀಮತಿ ಜಯಂತಿ, ಜಾನಪದ ಗಾಯನ ವಿಭಾಗದಿಂದ ಶ್ರೀ ಎನ್. ಗಣೇಶ್ ಗಂಗೊಳ್ಳಿ, ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ ವಿಭಾಗದಿಂದ ಶ್ರೀಮತಿ ಎಸ್. ಆರ್. ಸರೋಜ, ಚೌಡಕಿ ಪದ ವಿಭಾಗದಿಂದ ಶ್ರೀಮತಿ ಕಮಲಾ ಮರಗನ್ನವರ, ಜಾನಪದ ಸಂಗೀತ ವಿಭಾಗದಿಂದ ಶ್ರೀ ಪ್ರಭು ಬಸಪ್ಪ ಕುಂದರಗಿ, ಡೊಳ್ಳು ಕುಣಿತ ವಿಭಾಗದಿಂದ ಶ್ರೀ ಸೋಮಣ್ಣ ದುಂಡಪ್ಪ ಧನಗೊಂಡ, ಕರಡಿ ಮಜಲು ವಿಭಾಗದಿಂದ ಶ್ರೀ ಗಂಗಪ್ಪ. ಮ. ಕರಡಿ, ಹಾಲಕ್ಕಿ ಸುಗ್ಗಿ ಕುಣಿತ ವಿಭಾಗದಿಂದ ಶ್ರೀ ಗಣಪು ಬಡವಾ ಗೌಡ, ಸಂಪ್ರದಾಯದ ಪದ ಸೋಬಾನೆ ಪದ ವಿಭಾಗದಿಂದ ಶ್ರೀಮತಿ ಗಿರಿಜವ್ವ ಹನುಮಪ್ಪ ಬಣಕಾರ, ಹಗಲು ವೇಷ ವಿಭಾಗದಿಂದ ಡಾ.ಗೋವಿಂದಪ್ಪ ರಾಮಚಂದ್ರಪ್ಪ, ತತ್ವಪದ ವಿಭಾಗದಿಂದ ಶ್ರೀಮತಿ ಬೋರಮ್ಮ, ಜನಪದ ಗಾಯನ ವಿಭಾಗದಿಂದ ಶ್ರೀ ಮಾರುತಿ ಕೋಳಿ, ತತ್ವಪದ ವಿಭಾಗದಿಂದ ಶ್ರೀಮತಿ ಯಲ್ಲಮ್ಮ, ಭಜನೆ ವಿಭಾಗದಿಂದ ಶ್ರೀ ಹೆಚ್. ಚಂದ್ರಶೇಖರ ಹಡಪದ, ಹಗಲು ವೇಷ ವಿಭಾಗದಿಂದ ಶ್ರೀ ಕೆ.ಶಂಕರಪ್ಪ, ತತ್ವಪದ /ಭಜನೆ ವಿಭಾಗದಿಂದ ಶ್ರೀ ಗೋಪಣ್ಣ ಅವರುಗಳು ಆಯ್ಕೆ ಆಗಿದ್ದಾರೆ.
ಹಾಗೆಯೇ ತಜ್ಞ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಡಾ.ಜೀ.ಶಂ.ಪ ಪ್ರಶಸ್ತಿಯನ್ನು ಡಾ.ಮೈಲಹಳ್ಳಿ ರೇವಣ್ಣ ಅವರಿಗೆ ಡಾ.ಬಿ.ಎಸ್.ಗದ್ದಗಿಮಠ ಪ್ರಶಸ್ತಿಯನ್ನು ಡಾ. ವೆಂಕಟೇಶ ಇಂದ್ವಾಡಿ ಅವರ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್, ಸದಸ್ಯರಾದ ಡಾ.ಹುಲಿಕುಂಟೆ ಮೂರ್ತಿ, ಉಮೇಶ್, ಕೆಂಕೆರೆ ಮಲ್ಲಿಕಾರ್ಜುನ, ಶಂಕರಪ್ಪ ಸಂಕಣ್ಣನವರ್, ಮಂಜೇಶ್, ದೇವಾನಂದ ವರಪ್ರಸಾದ್, ರಾಮಪ್ಪ ಹಾಗು ರಿಜಿಸ್ಟ್ರಾರ್ ನಮ್ರತಾ ಇದ್ದರು.