ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜಿನಲ್ಲಿ ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ (ಎನ್‌ಐಸಿಯು) ನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿಯಿಂದ ರಕ್ಷಿಸಲ್ಪಟ್ಟ 39 ಮಕ್ಕಳ ಪೈಕಿ ಮತ್ತೊಂದು ಮಗು ಸೋಮವಾರ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಈಗ 12 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಅಗ್ನಿ ಅವಘಡದಿಂದ ರಕ್ಷಿಸಲ್ಪಟ್ಟ 37 ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಕಾಲೇಜಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ NICU ಘಟಕದಲ್ಲಿ ಸಂಭವಿಸಿದ ಬೆಂಕಿಯಿಂದ ರಕ್ಷಿಸಲ್ಪಟ್ಟ 39 ಮಕ್ಕಳಲ್ಲಿ ಒಟ್ಟು ಇಬ್ಬರು ಸಾವನ್ನಪ್ಪಿದ್ದಾರೆ. ಮಗುವನ್ನು ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿದೆ” ಎಂದು ಮಹಾರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ನರೇಂದ್ರ ಸಿಂಗ್ ಸೆಂಗಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ, ಭಾನುವಾರ ಮೃತಪಟ್ಟ ಶಿಶು ಗಂಭೀರ ಕಾಯಿಲೆಯಿಂದ ಬಳಲುತ್ತಿತ್ತು. ಆ ಶಿಶುವಿಗೆ ಯಾವುದೇ ಸುಟ್ಟ ಗಾಯಗಳು ಇರಲಿಲ್ಲ ಎಂದು ಹೇಳಿದೆ.
ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡಕ್ಕೆ ಸ್ವಿಚ್‌ಬೋರ್ಡ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ. ಈ ಅವಘಡದಲ್ಲಿ ಯಾವುದೇ ಪೂರ್ವ ನಿಯೋಜಿತ ಸಂಚು ಇಲ್ಲ ಎಂದು ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ರಚನೆ ಮಾಡಿದ್ದ ನಾಲ್ವರು ಸದಸ್ಯರ ಸಮಿತಿಯು ತಿಳಿಸಿದೆ.