Friday, April 26, 2024

ಸತ್ಯ | ನ್ಯಾಯ |ಧರ್ಮ

ನ್ಯಾಯಾಂಗಕ್ಕೆ ಬೆದರಿಕೆ:  ಹರೀಶ್ ಸಾಳ್ವೆ, ಪಿಂಕಿ ಆನಂದ್ ಸೇರಿ 600ಕ್ಕೂ ಹೆಚ್ಚು ವಕೀಲರಿಂದ ಸಿಜೆಐಗೆ ಪತ್ರ

ಬೆಂಗಳೂರು: ಭಾರತ ನ್ಯಾಯಾಂಗದ ಸಮಗ್ರತೆಯನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ, ಆದೀಶ್ ಅಗರ್‌ವಾಲಾ, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಉದಯ್ ಹೊಳ್ಳ, ಸ್ವರೂಪಮಾ ಚತುರ್ವೇದಿ ಸೇರಿದಂತೆ 600ಕ್ಕೂ ಹೆಚ್ಚು ವಕೀಲರು ಒಟ್ಟಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ನಿರ್ದಿಷ್ಟ ಹಿತಾಸಕ್ತಿಯನ್ನು ಹೊಂದಿರುವ ಗುಂಪೊಂದು ನ್ಯಾಯಾಂಗದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಒತ್ತಡ ಹಾಕುವ ತಂತ್ರಗಳನ್ನು ಬಳಸುತ್ತಿದೆ. ವಿಶೇಷವಾಗಿ ರಾಜಕೀಯ ವ್ಯಕ್ತಿಗಳಿಗೆ ಮತ್ತು ಭ್ರಷ್ಟಾಚಾರ ಆರೋಪಗಳಂತ ಪ್ರಕರಣಗಳಲ್ಲಿ ಇದು ನಡೆಯುತ್ತಿದೆ. ಇದರಿಂದಾಗಿ ಭಾರತದ ಪ್ರಜಾಸತ್ತಾತ್ಮಕ ಸಂರಚನೆ ಮತ್ತು ನ್ಯಾಯಾಂಗದ ಪ್ರಕ್ರಿಯೆಗಳಲ್ಲಿ ಇರಿಸಲಾಗಿರುವ ನಂಬಿಕೆಗೆ ಗಮನಾರ್ಹ ಅಪಾಯ ಎದುರಾಗುತ್ತದೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಂಗದ ‘ಸುವರ್ಣ ಯುಗ’ ಎಂಬ ಸುಳ್ಳು ನಿರೂಪಣೆಗಳನ್ನು ಪ್ರಚಾರ ಮಾಡುವ, ಪ್ರಸ್ತುತ ನ್ಯಾಯಾಂಗ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸುವ ಮತ್ತು ನ್ಯಾಯಾಲಯಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುವ  ಗುರಿಯನ್ನು ಹೊಂದಿರುವ ಹಲವಾರು ತಂತ್ರಗಳನ್ನು ವಕೀಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ಏನಿದೆ?

ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಮತ್ತು ನ್ಯಾಯಾಲಯಗಳನ್ನು ದೂಷಿಸಲು ಪಟ್ಟಭದ್ರ ಹಿತಾಸಕ್ತಿ ಗುಂಪೊಂದು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ವಕೀಲರ ಗುಂಪು ಕಳವಳ ವ್ಯಕ್ತಪಡಿಸುತ್ತದೆ, ವಿಶೇಷವಾಗಿ ಭ್ರಷ್ಟಾಚಾರವನ್ನು ಒಳಗೊಂಡಂತೆ ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳಲ್ಲಿ.

ಈ ಗುಂಪು ಪ್ರಸ್ತುತ ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಸಾರ್ವಜನಿಕ ನಂಬಿಕೆಯನ್ನು ಹಾಳುಮಾಡಲು ನ್ಯಾಯಾಂಗದ ಬಗ್ಗೆ ಸುಳ್ಳು ನಿರೂಪಣೆಗಳನ್ನು ರಚಿಸಿದ್ದಾರೆ.

ವಕೀಲರು ಮಾಡಿರುವ ಆರೋಪಗಳಲ್ಲಿ ‘ಬೆಂಚ್ ಫಿಕ್ಸಿಂಗ್ʼ, ದೇಶೀಯ ನ್ಯಾಯಾಲಯಗಳನ್ನು ಕಾನೂನುಬಾಹಿರ ಆಡಳಿತದಲ್ಲಿರುವವರಿಗೆ ಅಗೌರವಪೂರ್ವಕವಾಗಿ ಹೋಲಿಕೆ ಮಾಡುವುದು ಮತ್ತು ನ್ಯಾಯಾಧೀಶರ ಗೌರವದ ಮೇಲೆ ನೇರ ದಾಳಿಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಈ ಪಟ್ಟಭದ್ರ ಹಿತಾಸಕ್ತ ಗುಂಪು ಬಳಸುವ ತಂತ್ರಗಳಲ್ಲಿ ಅವರ ರಾಜಕೀಯ ಕಾರ್ಯಸೂಚಿಯ ಆಧಾರದ ಮೇಲೆ ನ್ಯಾಯಾಲಯದ ನಿರ್ಧಾರಗಳ ಬಗ್ಗೆ ಸೆಲೆಕ್ಟಿವ್‌ ಟೀಕೆ ಮಾಡುವುದು ಅಥವಾ ಪ್ರಶಂಸಿಸುವದೂ ಸೇರಿದೆ. ಇದನ್ನು ” “My way or the highway”” ವಿಧಾನ ಎಂದು ವಿವರಿಸಲಾಗಿದೆ.

ಕಳವಳಗಳೇನು?

  • ರಾಜಕೀಯ ಫ್ಲಿಪ್-ಫ್ಲಾಪಿಂಗ್, ಅಲ್ಲಿ ರಾಜಕಾರಣಿಗಳು ನ್ಯಾಯಾಲಯದಲ್ಲಿ ತಮ್ಮನ್ನು ರಕ್ಷಿಸಲು ಪರ್ಯಾಯ ತಂತ್ರಗಳನ್ನು ಮಾಡುತ್ತಾರೆ.
  • ನ್ಯಾಯಾಂಗ ನೇಮಕಾತಿಗಳು ಮತ್ತು ತೀರ್ಪುಗಳ ಮೇಲೆ ಪ್ರಭಾವ ಬೀರಲು ಅಂಡರ್‌ಹ್ಯಾಂಡ್ ತಂತ್ರಗಳ ಬಳಕೆ ಮತ್ತು ಸುಳ್ಳು ಮಾಹಿತಿಯ ಪ್ರಸಾರ.
  • 2018-2019ರಲ್ಲಿ ಇದೇ ರೀತಿಯ ಚಟುವಟಿಕೆಗಳಿಗೆ ಸಮಾನಾಂತರವಾಗಿ ಚುನಾವಣಾ ಅವಧಿಗಳ ಸುತ್ತ ನಡೆದ ಈ ತಂತ್ರಗಳನ್ನು ವಕೀಲರು ಗಮನಿಸಿದ್ದಾರೆ.
  • ನ್ಯಾಯಾಂಗದ ಸಮಗ್ರತೆಯನ್ನು ಕಾಪಾಡಲು ಈ ರೀತಿಯ ದಾಳಿಗಳ ವಿರುದ್ಧ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಾರ್‌ನ ಹಿರಿಯ ಸದಸ್ಯರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
  • ಈ ಸವಾಲುಗಳನ್ನು ಎದುರಿಸಲು ಒತ್ತಾಯಿಸಿ, ಪ್ರಜಾಪ್ರಭುತ್ವದ ಪ್ರಬಲ ಸ್ತಂಭವಾಗಿ ನ್ಯಾಯಾಂಗವನ್ನು ಉಳಿಸಲು ಒಗ್ಗಟ್ಟಾಗಲು ಈ ಪತ್ರದಲ್ಲಿ ಕರೆ ನೀಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು