Home ಬ್ರೇಕಿಂಗ್ ಸುದ್ದಿ ಸಚಿವರಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಕೆ.ಎಂ.ಶಿವಲಿಂಗೇಗೌಡರು – ಬರ ಪರಿಸ್ಥಿತಿಯ ವೀಕ್ಷಣೆ

ಸಚಿವರಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಕೆ.ಎಂ.ಶಿವಲಿಂಗೇಗೌಡರು – ಬರ ಪರಿಸ್ಥಿತಿಯ ವೀಕ್ಷಣೆ

ಹಾಸನ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಯಾದ ಹಾಸನಕ್ಕೆ ಆಗಮಿಸಿದ ನೂತನ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.ಜಿಲ್ಲೆಯ ಗಡಿಭಾಗದ ಕಿರಿಸಾವೆಯಲ್ಲಿ ನೂತನ ಸಚಿವರಿಗೆ ಪಟಾಕಿ ಸಿಡಿಸಿ, ಭವ್ಯ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಸಿ.ಎನ್.ಬಾಲಕೃಷ್ಣ ಕೂಡ ನೂತನ ಸಚಿವರಿಗೆ ಹೂಗುಚ್ಚ ನೀಡಿ ಶುಭ ಹಾರೈಸಿದರು.

ಸಚಿವರನ್ನು ಹತ್ತಿರದಿಂದ ನೋಡಲು ಹಾಗೂ ಹೂಗುಚ್ಚ ನೀಡಲು ಕಾರ್ಯಕರ್ತರು ಮತ್ತು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು.ಬರ ಅಧ್ಯಯನಕ್ಕೆ ಚಾಲನೆ ಸ್ವಾಗತ ಸ್ವೀಕಾರ ಸಮಾರಂಭದ ಬಳಿಕ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ತಕ್ಷಣವೇಕ್ಷೇತ್ರದ ಕಡೆ ಗಮನಹರಿಸಿದ್ದು, ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಲು ಮುಂದಾಗಿದ್ದಾರೆ.

ರಾಜ್ಯ ಸರ್ಕಾರದ ಸೂಚನೆಯಂತೆ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎಂ.ಶಿವಲಿಂಗೇಗೌಡ ಅವರು ಚನ್ನರಾಯಪಟ್ಟಣ, ಹೊಳೆನರಸೀಪುರ ಹಾಗೂ ಅರಕಲಗೂಡು ತಾಲ್ಲೂಕುಗಳಲ್ಲಿ ನೇರವಾಗಿ ಸಂಚರಿಸಿ, ಮಳೆಯಿಲ್ಲದೆ ಒಣಗಿ ಹೋಗಿರುವ ಬೆಳೆಗಳನ್ನು ಪರಿಶೀಲಿಸಿ, ಬರ ಪರಿಸ್ಥಿತಿಯ ವಾಸ್ತವಿಕ ಅಧ್ಯಯನ ನಡೆಸಲಿದ್ದಾರೆ.

You cannot copy content of this page

Exit mobile version