Home ಬ್ರೇಕಿಂಗ್ ಸುದ್ದಿ ಕೆ.ಎಂ. ಶಿವಲಿಂಗೇಗೌಡ್ರೆ ಹುಚ್ಚುಚ್ಚು ಹೇಳಿಕೆ ನೀಡಿ ಮಂತ್ರಿ ಆಗುವ ಭಾವನೆಯಿಂದ ಹೊರಬನ್ನಿ: ಸಂತೋಷ್ ಟೀಕೆ

ಕೆ.ಎಂ. ಶಿವಲಿಂಗೇಗೌಡ್ರೆ ಹುಚ್ಚುಚ್ಚು ಹೇಳಿಕೆ ನೀಡಿ ಮಂತ್ರಿ ಆಗುವ ಭಾವನೆಯಿಂದ ಹೊರಬನ್ನಿ: ಸಂತೋಷ್ ಟೀಕೆ

0

ಹಾಸನ: ನಾಗರೀಕನಾಗಿ ನಮ್ಮ ಜನತೆಗೆ ಅವಶ್ಯಕತೆ ಬೇಕಾಗಿರುವುದು ಬಾಂಬ್ ಹಾಕುವಂತದ್ದು, ರಕ್ತಕ್ರಾಂತಿ ಮಾಡುವುದಲ್ಲ. ಅರಸೀಕೆರೆಗೆ ಅವಶ್ಯಕತೆ ಬೇಕಾಗಿರುವುದು ಜಲಕ್ರಾಂತಿ ಆಗಬೇಕಾಗಿದೆ ಎಂದು ಜೆಡಿಎಸ್ ಮುಖಂಡರಾದ ಸಂತೋಷ್ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡುತ್ತಾ, ಈ ಸರಕಾರಕ್ಕೆ ಏನಾದರೂ ತೊಂದರೆ ಆದರೇ ರಕ್ತ ಕ್ರಾಂತಿ ಆಗುತ್ತದೆ ಎಂದು ಶಾಸಕ ಶಿವಲಿಂಗೇಗೌಡರು ಹಿಂದೆ ಹೇಳಿಕೆ ನೀಡಿದ್ದು, ಮತ್ತು ಎತ್ತಿನ ಹೊಳೆ ಯೋಜನೆಯಲ್ಲಿ ಬಾಂಬ್ ಹಾಕಿ ಜಮೀನು ಬಿಡಿಸಿಕೊಳ್ಳುವುದಾಗಿ ಕೆಲ ದಿನಗಳ ಹಿಂದೆ ಕೆಡಿಪಿ ಸಭೆಯಲ್ಲಿ ಹೇಳಿದ್ದು, ತಮಟೆ ಬಡಿಯುತ್ತೀನಿ ಎಂದು ಹೇಳಿ ಗೋಪಾಲಸ್ವಾಮಿ ಅವರೆ ಎಂದು ಚನ್ನರಾಯಪಟ್ಟಣದ ಕಾರ್ಯಕ್ರಮವೊಂದರಲ್ಲಿ ಗೋಗರಿಯುತ್ತಿದ್ದರು. ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ ಅದಕ್ಕೆ ನಮ್ಮ ಸಹಾನುಭೂತಿ ಇದೆ. ಮಂತ್ರಿ ಆಗಲೇಬೇಕೆನ್ನುವ ಉದ್ದೇಶದಿಂದ ಇಷ್ಟೆಲ್ಲಾ ಹೇಳಿಕೆ ಮತ್ತು ದಂಬರಾಟಗಳನ್ನು ನಡೆಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು. ಅರಸೀಕೆರೆ ನಾಗರೀಕನಾಗಿ ನಮ್ಮ ಜನತೆಗೆ ಅವಶ್ಯಕತೆ ಬೇಕಾಗಿರುವುದು ಬಾಂಬ್ ಹಾಕುವಂತದ್ದು, ರಕ್ತಕ್ರಾಂತಿ ಮಾಡುವುದಲ್ಲ. ಅರಸೀಕೆರೆಗೆ ಅವಶ್ಯಕತೆ ಇರುವುದು ಜಲಕ್ರಾಂತಿ ಆಗಬೇಕಾಗಿದೆ. ಇಲ್ಲಿ ನೀರಾವರಿಯಿಂದ ನಾವು ವಂಚಿತರಾಗಿದ್ದೇವೆ. ಹೇಮಾವತಿ ನದಿ ಹುಟ್ಟಿದ ಜಿಲ್ಲೆಯಲ್ಲಿ ಇದ್ದರೂ ಕೂಡ ಕಾವೇರಿ, ಕೃಷ್ಣ ಬೇಸಿಕ್ನ ಕಥೆ ಕೇಳಿಕೊಂಡು ಇಷ್ಟು ವರ್ಷ ಬರಗಾಲದ ಬೆಂಗಾಡಲ್ಲಿ ನಮ್ಮ ಜನರು ನರಳುತ್ತಿದ್ದಾರೆ. ದಯಮಾಡಿ ನೀವು ಯಾರಿಗೊಸ್ಕರ ರಕ್ತಕ್ರಾಂತಿ ಮಾಡಬೇಡಿ. ಜಲಕ್ರಾಂತಿ ಮಾಡಿ ಎಂದು ಸಲಹೆ ನೀಡಿದರು. ನಾನು ವಿರೋಧ ಪಕ್ಷದಲ್ಲಿದ್ದೆ ಒಬ್ಬ ಶಾಸಕನಾಗಿ ಕೆಲಸ ಹೆಚ್ಚು ಮಾಡುವುದಕ್ಕೆ ಆಗಿರಲಿಲ್ಲ. ಎಂದು ಹೇಳಲಾಗಿತ್ತು. ಕ್ಯಾಬಿನೆಟ್ ದರ್ಜೆಯ ಗೃಹ ಮಂಡಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೀರಿ, ಮುಂದಾದರೂ ರಕ್ತಕ್ರಾಂತಿ ಬಿಟ್ಟು ಜಲಕ್ರಾಂತಿ ಮಾಡಿ ಎಂದು ಅರಸೀಕೆರೆ ಜನತೆ ನಿಮ್ಮನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದರು. ಮಂತ್ರಿ ಆಗಲೇಬೇಕು ಎನ್ನುವ ಉದ್ದೇಶದಲ್ಲಿ ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನಕೊಡಿ ನೀವು. ನಿಮ್ಮ ಮಾನಸಿಕ ಸ್ಥಮ್ಮಿತ ಏಕೋ ಕಳೆದುಕೊಳ್ಳುತ್ತೀದರ‍್ಥೆಂದು ಹೇಳಿ ಜನರು ಹಾದಿ ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.. ಹೆಚ್.ಡಿ. ದೇವೇಗೌಡರ ಬಗ್ಗೆ, ಮಾಜಿ ಸಿಎಂ ಕುಮಾರಣ್ಣರ ಬಗ್ಗೆ ನಮ್ಮ ನಾಯಕರಾದ ರೇವಣ್ಣರ ಬಗ್ಗೆ ಮತ್ತೆ ಏನಾದರೂ ಹಗುರವಾಗಿ ಮಾತನಾಡಿದರೇ ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಮೂರು ಬಾರಿ ಜೆಡಿಎಸ್ ಚಿಹ್ನೆಯಿಂದ ಮತ್ತು ಒಂದು ಬಾರಿ ಕಾಂಗ್ರೆಸ್ ಚಿಹ್ನೆಯಿಂದ ಶಾಸಕರಾಗಿದ್ದೀರಿ. ರಾಜಕಾರಣದಲ್ಲಿ ನಿಮಗೂ ಅನುಭವವಿದೆ. ಅರಸೀಕೆರೆ ಮತ್ತು ಹಾಸನಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡರ ಕೊಡುಗೆ ಏನು ಎಂದು ಎದೆಮುಟ್ಟಿಕೊಂಡು ಹೇಳಿ ಎಂದು ಸವಾಲು ಹಾಕಿದರು. ಹೇಳಿ ಹರಗಿಸಿಕೊಳ್ಳಲು ಸಾಧ್ಯವೇ? ಈ ರೀತಿ ಹುಚ್ಚುಚ್ಚು ಹೇಳಿಕೆ ಕೊಡುವುದರ ಮೂಲಕ ಕಾಂಗ್ರೆಸ್ ನಾಯಕರ ಗಮನಸೆಳೆಯುತ್ತೀನಿ ನಾನು ನನ್ನ ಮಂತ್ರಿ ಮಾಡುತ್ತಾರೆ ಎನ್ನುವ ಭಾವನೆಯಿಂದ ಆಚೆ ಬನ್ನಿ, ಹಿಂದು ಹಿಂದೂ ಎಂದು ಲಾಂಗಿಕ ಭಾಷೆಯನ್ನು ಬಹಳ ಅಸಯ್ಯವಾಗಿ ವಿಧಾನ ಮಂಡಳದಲ್ಲಿ ತೋರಿಸುತ್ತೀರಿ! ನಿಮ್ಮ ಹೆಸರು ಶಿವಲಿಂಗೇಗೌಡರು, ಆ ಹೆಸರು ಬಂದಿರುವುದು ಪೂರ್ವಿಕರು ಎಲ್ಲಾ ಪರಂಪರೆಯ ಸಂಸ್ಕೃತಿಯಲ್ಲಿ ಬೆಳೆಸಿಕೊಂಡು ಬಂದರೂ ಉಳಿಸಿಕೊಂಡು ಬಂದಿದ್ದಾರೆ. ಇಲ್ಲ ಅಂದರೇ ನಿಮ್ಮನ್ನು ಬೇರೆ ರೀತಿ ಕರೆಯಬೇಕಾಗಿತ್ತು ಎಂದು ಕೆಂಡಮAಡಲವಾದರು.

ಅರಸೀಕೆರೆ ಕಸಬಾ ಜಾಜೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 70 ಮತ್ತು 71 ರ ಮದ್ಯೆ ಕಾಮಗಾರಿಯ ಮಾರ್ಗ ಸೂಚನೆಗಳನ್ನು ಪಾಲಿಸದೆ ಎಂಐ ಇಲಾಖೆಯಿಂದ ಅಕ್ರಮವಾಗಿ ಸುಮಾರು ಒಂದು ಕೋಟಿ ವೆಚ್ಚದ ಸೇತುವೆಯನ್ನು ನಿರ್ಮಾಣ ಮಾಡಿgದ್ದು, ಹಳ್ಳಿಗಳ ಮದ್ಯೆ ಸಂಪರ್ಕ ರಸ್ತೆ ಇಲ್ಲದಿದ್ದರು ಸೇತುವೆ ಮಾಡಿರುತ್ತಾರೆ. ಇದರ ಉದ್ದೇಶ ಪ್ರಸ್ತುತ ಅಧ್ಯಕ್ಷರಾಗಿರುವ ಸಮಿವುಲ್ಲಾ ಮತ್ತು ಅವರ ಪತ್ನಿ, ಮಕ್ಕಳು, ಅಳಿಯನ ಹೆಸರಿನಲ್ಲಿ ಇವರ ಅಪ್ತ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟೇಶ್ ಮತ್ತು ಅವರ ಪತ್ನಿ, ತಂದೆ ಹೆಸರಿನಲ್ಲಿ ಜಮೀನು ಇದ್ದು, ಒಟ್ಟಾರೆಯಾಗಿ ಸುಮಾರು 14 ಎಕರೆ ಜಮೀನು ಇದ್ದು ಶಾಸಕರ ಅಧಿಕಾರ ದುರುಪಯೋಗ ಮಾಡಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬಡಾವಣೆ ಮಾಡಲು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ. ಸಮಿವುಲ್ಲಾ ಮತ್ತು ಅವರ ಅಪ್ತರು ಹೊಸ ಬಡಾವಣೆಗಳನ್ನು ಮಾಡಲು ಹೊರಟಿರುವ ಜಾಗಗಳ ಹತ್ತಿರ ರಸ್ತೆ ನಿರ್ಮಾಣ ಮಾಡುತ್ತಿರುವುದು. ಉದಾಹರಣೆಗೆ ಕೆ.ಎಸ್.ಆರ್.ಟಿ.ಸಿ. ಡಿಪೋ ಹಿಭಾಂಗ ಟಾರ್ ರಸ್ತೆ ನಿರ್ಮಾಣ ಹಾಗೂ ವಾರ್ಡ್ ಸಂಖ್ಯೆ 30 ಮಾರುತಿ ನಗರದ ಟಮೋಟೊ ಗೋಡೌನ್ ಹತ್ತಿ ಸಿಸಿ ರಸ್ತೆ ನಿರ್ಮಾಣ ಮಾಡಿರುವುದು.ಇದರಿಂದ ಸಾರ್ವಜನಿಕರ ತೆರಿಗೆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವುದು.ಯಾವ ಸದಸ್ಯ ಇವರ ಜೊತೆ ಹೊಂದಾಣಿಕೆ ಮಾಡಿಕೊಳ್ಳವುದಿಲ್ಲ ಅವರ ವಾರ್ಡಿನಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗದಂತೆ ನೋಡಿಕೊಳ್ಳುವುದರ ಜೊತೆಗೆ ಅಧಿಕಾರಿಗಳನ್ನು ತನ್ನ ಕೈಗೊಂಬೆಯAತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ನಗರಸಭೆಯಲ್ಲಿ ಸಾರ್ವಜನಿಕರ ಭೇಟಿಯನ್ನು ಮದ್ಯಾನ 3-30ರ ನಂತರ ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದು. ಸರ್ಕಾರಿ ಸೇವೆಯಿಂದ ಸಾರ್ವಜನಿಕರನ್ನು ದೂರ ಇಡುವುದರ ಜೊತೆಗೆ ಅಕ್ರಮ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದೆ. ಹಿಂದಿನ ಅವಧಿಯ ಅಧ್ಯಕ್ಷರಾದ ಗಿರೀಶ್ ರವರ ಅವಧಿಯಲ್ಲಿ ಅಂತಿಮವಾಗಿದ್ದ ಕೆಲವು ಕಾಮಗಾರಿಗಳನ್ನು ಶಾಸಕರ ಪ್ರಭಾವದಿಂದ ತಡೆಯಿಡಿದು ಇವಾಗ ಅದಕ್ಕೆ ಚಾಲನೆ ಕೊಟ್ಟು ನಾನೇ ಮಾಡಿದ್ದು ಎಂದು ಬಂಡತನದ ಆಡಳಿತ ಮಾಡುತ್ತಿರುವ ಅಧ್ಯಕ್ಷರಾದ ಸಮೀವುಲ್ಲಾ. ಹಾಗೂ ಗಿರೀಶ್ ರವರ ಅವಧಿಯಲ್ಲಿ ಅಂತಿಮವಾಗಿರು ವಿದ್ಯಾರ್ಥಿ ವೇತನವನ್ನು ಸಹ ನಾನೇ ಕೊಡಿಸಿದ್ದು ಅಂತ ಹೇಳಿಕೊಳ್ಳುತ್ತಾ ಬರಿ ಪ್ರಚಾರ ತೆಗೆದುಕೊಳ್ಳುವುದಕ್ಕೆ ಮಾತ್ರ ಇವರ ಆಡಳಿತ ಸಿಮಿತವಾಗಿದೆ. 5) ಅರಸೀಕೆರೆ ನಗರದ ತುಂಬಾ ಹೇಮಾವತಿ ನೀರನ್ನು ವಾರಕ್ಕೆ ಒಂದು ಬಾರಿ ಹೆಚ್ಚೆಂದರೆ ಎರಡು ಬಾರಿ ಮಾತ್ರ ಅಲ್ಪ ಪ್ರಮಾಣದಲ್ಲಿ ನೀರನ್ನು ಬಿಡುವುದರ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವುದೆ ಇವರ ಕೆಲಸವಾಗಿದೆ ಎಂದರು. ಅರಸೀಕೆರೆ ನಗರದ ಕೆಲವು ಪ್ರಮುಖ ಉದ್ಯಮಿಗಳಿಗೆ ತೆರಿಗೆ ನೋಟಿಸ್ ನೀಡುವುದರ ಮೂಲಕ ಅವರು ಸಮೀವುಲ್ಲಾರವರ ಹತ್ತಿರ ಬರುವಂತೆ ಮಾಡಿ ತದನಂತರ ಅವರಿಂದ ಲಕ್ಷಗಟ್ಟಲೆ ಹಣವನ್ನು ವಸೂಲಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಈಗಾಗಲೆ 10 ಹೊಸ ಬಡಾವಣೆಗಳಲ್ಲಿ ನೆಡೆದಿರುವ ಅಕ್ರಮಗಳನ್ನು ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಾಲಾಗಿದ್ದು, ಅಂಚೆಕೊಪ್ಪಲು ಹತ್ತಿರ ಕುಮಾರಿಬಾಯಿ ಎಂಬುವರ ಹೆಸರಿನಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡುತ್ತಿದ್ದು, ಪ್ರಕರಣ ದಾಖಲಾದ ತಕ್ಷಣ ರಸ್ತೆಯನ್ನು ಸರಿಪಡಿಸಿದ್ದಾರೆ.ಇದರಲ್ಲಿ ತಿಳಿಯುತ್ತದೆ ಎಲ್ಲಾ ಹತ್ತು ಲೇಔಟ್ ಗಳು ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ ಅಂತ. ವಿನಾ ಕಾರಣ ಪೌರಾಯುಕ್ತರು, ಇಂಜೀನಿಯರ್ ಮತ್ತು ಕಂದಾಯ ಅಧಿಕಾರಿಗೆ ಖಾತೆ ಮಾಡುವಂತೆ ಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ನಗರಸಭೆಯ ಸದಸ್ಯರ ಅನರ್ಹತೆಯ ಪ್ರಕರಣವನ್ನು ವಿನಾ ಕಾರಣ ಮುಂದೂಡುತ್ತಾ ಬಂದಿದ್ದು, ಹಾಗಾಗಿ ಸುಜಾತ ರಮೇಶ್ ರವರು ಈ ಪ್ರಕರಣಕ್ಕೆ ನಿರ್ದೇಶನ ನೀಡಬೇಕೆಂದು ಹೈಕೊರ್ಟ್ ಮೇಟ್ಟಿಲೆರಿದ್ದಾರೆ. ಒಟ್ಟಾರೆಯಾಗಿ ನಗರಸಭೆಯನ್ನು ತನ್ನ ದುಡುಮೆಗಾಗಿ ಜನರ ತೆರೆಗೆ ಹಣದಲ್ಲಿ ತನ್ನ ಸ್ವಂತ ಅಭಿವೃದ್ಧಿಗೆ ಆಗುವುದೆ ಸಮಿವುಲ್ಲಾರವರ ಉದ್ದೇಶವಾಗಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅರಸೀಕೆರೆ ಮುಖಂಡರಾದ ಜಾಜೂರು ಗ್ರಾಪಂ ನಾಯಕರಾದ ಕಾಟೀಕೆರೆ ಮೋಹನ್, ಮೇಲಗಿರಿ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ರಮೇಶ್, ರಮೇಶ್ ನಾಯ್ಡ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version