Home ದೇಶ ರಾಜ್ಯಸಭೆಗೆ ಕಮಲ್ ಹಾಸನ್..!

ರಾಜ್ಯಸಭೆಗೆ ಕಮಲ್ ಹಾಸನ್..!

0

ಚೆನ್ನೈ, ಫೆ.13: ಸೂಪರ್‌ಸ್ಟಾರ್‌ನಿಂದ ರಾಜಕಾರಣಿಯಾಗಿ ಬದಲಾದ ಕಮಲ್ ಹಾಸನ್ ಈಗ ರಾಜ್ಯಸಭೆಗೆ ಹೆಜ್ಜೆಯಿಡುವ ಸೂಚನೆ ಕಾಣುತ್ತಿದೆ. ಡಿಎಂಕೆ ಬೆಂಬಲದೊಂದಿಗೆ ತಮಿಳುನಾಡಿನಿಂದ ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುವುದು ಎಂಬುದಾಗಿ ವರದಿಗಳು ತಿಳಿಸಿವೆ.

ಆರು ರಾಜ್ಯಸಭಾ ಸದಸ್ಯರು ಜುಲೈ 24, 2025 ರಂದು ನಿವೃತ್ತರಾಗಲಿದ್ದು ಈ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಕಮಲ್‌ ಹಾಸನ್‌ ಅವರ ಎಂ ಎನ್‌ ಎಂ ಪಕ್ಷಕ್ಕೆ ನೀಡುವುದಾಗಿ ಈ ಹಿಂದೆ ಡಿಎಂಕೆಯೊಂದಿಗೆ ಒಪ್ಪಂದವಾಗಿತ್ತು.

ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಪಿಕೆ ಶೇಖರ್ ಬಾಬು ಬುಧವಾರ ಕಮಲ್ ಹಾಸನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ನಂತರ ಈ ಊಹಾಪೋಹಗಳು ಹೆಚ್ಚು ಗಮನ ಸೆಳೆದಿವೆ. ಎಂಎನ್‌ಎಂ ಇದನ್ನು ಸಚಿವರ ಸೌಜನ್ಯದ ಭೇಟಿ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಅವರ ಭೇಟಿಯ ನಂತರ ಈ ಚರ್ಚೆ ಮತ್ತಷ್ಟು ಹೆಚ್ಚಾಗಿದ್ದು ಕಮಲ್‌ ಹಾಸನ್‌ ಅವರು ರಾಜ್ಯಸಭೆಗೆ ಹೆಜ್ಜೆ ಇಡಲಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಪಿಟಿಐ ಮೂಲಗಳ ಪ್ರಕಾರ, ಎಂಎನ್‌ಎಂಗೆ ರಾಜ್ಯಸಭಾ ಸ್ಥಾನ ನೀಡುವ ಬಗ್ಗೆ ಹೊಸದೇನೂ ಇಲ್ಲ ಮತ್ತು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಮಾಡಿಕೊಂಡಾಗಲೇ ಡಿಎಂಕೆ ನಾಯಕತ್ವವು 2025 ರಲ್ಲಿ ಸಂಸತ್ತಿನ ಮೇಲ್ಮನೆಯಲ್ಲಿ ಒಂದು ಸ್ಥಾನವನ್ನು ಪಕ್ಷಕ್ಕೆ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗ ಡಿಎಂಕೆ ನಡೆಯಲಿರುವುದಾಗಿ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ಆರು ರಾಜ್ಯಸಭಾ ಸದಸ್ಯರು ಜುಲೈ 24, 2025 ರಂದು ನಿವೃತ್ತರಾಗಲಿದ್ದಾರೆ, ಅವರೆಂದರೆ ಅನ್ಬುಮಣಿ ರಾಮದಾಸ್ (ಪಿಎಂಕೆ), ಎಂ ಷಣ್ಮುಗಂ (ಡಿಎಂಕೆ), ಎನ್ ಚಂದ್ರಶೇಖರನ್ (ಎಐಎಡಿಎಂಕೆ), ಎಂ ಮೊಹಮ್ಮದ್ ಅಬ್ದುಲ್ಲಾ (ಡಿಎಂಕೆ), ಪಿ ವಿಲ್ಸನ್ (ಡಿಎಂಕೆ), ಮತ್ತು ವೈಕೊ (ಎಂಡಿಎಂಕೆ). 

ಒಟ್ಟಾರೆಯಾಗಿ, ತಮಿಳುನಾಡಿನಲ್ಲಿ 18 ರಾಜ್ಯಸಭಾ ಸದಸ್ಯರಿದ್ದು, ಜುಲೈ 2025 ರಲ್ಲಿ, ಆಡಳಿತಾರೂಢ ಡಿಎಂಕೆ 4 ಸಂಸದರನ್ನು ಮೇಲ್ಮನೆಗೆ ಮತ್ತು ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ 2 ಸಂಸದರನ್ನು ಕಳುಹಿಸುವ ನಿರೀಕ್ಷೆಯಿದೆ; ಮತ್ತು ಈ ಪಟ್ಟಿಯಲ್ಲಿ ದ್ರಾವಿಡ ಪ್ರಮುಖ ಪಕ್ಷಗಳ ಮಿತ್ರಪಕ್ಷಗಳ ನಾಮನಿರ್ದೇಶಿತರೂ ಸೇರಿದ್ದಾರೆ.

You cannot copy content of this page

Exit mobile version