Home Uncategorized ರಜತ್ ಪಾಟೀದಾರ್ RCB ಮುನ್ನಡೆಸುವ ಹೊಸ ನಾಯಕ l IPL 2025

ರಜತ್ ಪಾಟೀದಾರ್ RCB ಮುನ್ನಡೆಸುವ ಹೊಸ ನಾಯಕ l IPL 2025

0

ಬೆಂಗಳೂರು: 2025ರ ಐಪಿಎಲ್ ಸೀಸನ್‌ ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವನ್ನು ಮುನ್ನಡೆಸುವ ನೂತನ ನಾಯಕರಾಗಿ ರಜತ್ ಪಾಟೀದಾರ್ ಆಯ್ಕೆಯಾಗಿದ್ದಾರೆ.

ಹೀಗಾಗಿ ತಂಡದ ನಾಯಕತ್ವಕ್ಕೆ ಮತ್ತೊಮ್ಮೆ ವಿರಾಟ್ ಕೊಹ್ಲಿಯ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ, ನಾಯಕರಾಗಲು ವಿರಾಟ್ ಕೊಹ್ಲಿ ನಿರಾಕರಿಸಿದ್ದರು. ಆದರೆ ಕಳೆದ ಮೂರು ಋತುಗಳಲ್ಲಿ RCB ತಂಡವನ್ನು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದರು. ಆದರೆ, ಕಳೆದ ಬಾರಿಯ ಹರಾಜಿಗೂ ಮುನ್ನವೇ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ತಂಡದ ಹೊಣೆಯನ್ನು ಯುವ ಆಟಗಾರರಿಗೆ ವಹಿಸಲು ಸಲಹೆ ಕೇಳಿ ಬಂದಿತ್ತು.

ಹೀಗಾಗಿ, RCB ತಂಡದ ನಾಯಕತ್ವಕ್ಕೆ ದೇಶೀಯ ಕ್ರಿಕೆಟ್ ನಲ್ಲಿ ನಾಯಕತ್ವದ ಅನುಭವ ಹೊಂದಿರುವ ರಜತ್ ಪಾಟೀದಾರ್ ಹಾಗೂ ಕೃನಾಲ್ ಪಾಂಡ್ಯರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಇಂದು ಅಂತಿಮವಾಗಿ ರಜತ್ ಪಾಟೀದಾರ್ ಅವರನ್ನು RCB ತಂಡದ ನೂತನ ನಾಯಕರನ್ನಾಗಿ ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಲಾಗಿದೆ.

You cannot copy content of this page

Exit mobile version