Home ಬೆಂಗಳೂರು ಕರ್ನಾಟಕ: ದೀಪಾವಳಿಯಲ್ಲಿ ಕೇವಲ ಎರೆಡು ಗಂಟೆಗಳ ಕಾಲ ಪಟಾಕಿ ಸಿಡಿಸುವಂತೆ ಕೆಎಸ್‌ಪಿಸಿಬಿ ಸೂಚನೆ

ಕರ್ನಾಟಕ: ದೀಪಾವಳಿಯಲ್ಲಿ ಕೇವಲ ಎರೆಡು ಗಂಟೆಗಳ ಕಾಲ ಪಟಾಕಿ ಸಿಡಿಸುವಂತೆ ಕೆಎಸ್‌ಪಿಸಿಬಿ ಸೂಚನೆ

0

ಬೆಂಗಳೂರು: ಮುಂಬರುವ ದೀಪಾವಳಿಯಂದು ರಾಜ್ಯದ ಜನರು ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿನ ನಿರ್ದೇಶನಗಳು ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ಅನುಗುಣವಾಗಿದ್ದು,  ನಗರದ ವಾಯು ಮಾಲಿನ್ಯ ಮತ್ತು  ಶಬ್ದ ಮಾಲಿನ್ಯ ತಡೆಗಟ್ಟುವ ಉದ್ದೇಶ ಹೊಂದಿವೆ. ಈ ನಿಟ್ಟಿನಲ್ಲಿ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಿಂದ ತಿಳಿದುಬಂದಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಜಿಲ್ಲಾಡಳಿತ ಮತ್ತು ಪೊಲೀಸ್‌ ಪಡೆಗಳಂತಹ ಸರ್ಕಾರಿ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕ ಪತ್ರಗಳನ್ನು ಬರೆದು ಎರೆಡು ಗಂಟೆಗಳ ನಿಯಮವನ್ನು ಜಾರಿಗೊಳಿಸಿಸಲು ಸೂಚಿಸಿದೆ.

ಪರಿಸರ ಸ್ನೇಹಿಯಲ್ಲದ ಪಟಾಕಿಗಳ ಮಾರಟವನ್ನು ನಿಯಂತ್ರಿಸಲು ಮತ್ತು ʼಹಸಿರು ಪಟಾಕಿʼಗಳ ಮಾರಾಟವನ್ನು ಉತ್ತೇಜಿಸಲು, ಮಂಡಳಿಯು ನೆಲದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಮಾರಾಟವಾಗುವ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಲು ʼವೈಜ್ಞಾನಿಕ ಅಧಿಕಾರಿʼಯನ್ನು ನೇಮಿಸಿದೆ.

ಸುಪ್ರೀಂ ಕೋರ್ಟ್ ರಾತ್ರಿ 8 ರಿಂದ ರಾತ್ರಿ 10 ರವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದ್ದು, ಹಬ್ಬದ ದಿನಗಳಲ್ಲಿ ಇತರ ಸಮಯಗಳಲ್ಲಿ ಅದನ್ನು ನಿಷೇಧಿಸಿದೆ. ಇದಲ್ಲದೆ, ಇದು ಹಸಿರು ಪಟಾಕಿ ಹೊರತುಪಡಿಸಿ ಎಲ್ಲಾ ರೀತಿಯ ಪಟಾಕಿಗಳನ್ನು ನಿಷೇಧಿಸಿದೆ. ಆದ್ದರಿಂದ, ಎಲ್ಲಾ ಜಾರಿ ಸಂಸ್ಥೆಗಳು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸುತ್ತೋಲೆಯ ಪ್ರಕಾರ ದೀಪಾವಳಿ ಹಬ್ಬದ ಮೊದಲು ಮತ್ತು ನಂತರ ಒಂದು ವಾರದ ಅವಧಿಗೆ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯದ ಗುಣಮಟ್ಟವನ್ನು ಮಾಲಿನ್ಯ ನಿಯಂತ್ರಕವು ಅಳೆಯುತ್ತದೆ. ಹೀಗಾಗಿ 2018 ರಲ್ಲಿ ಉನ್ನತ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

You cannot copy content of this page

Exit mobile version