ಬೆಂಗಳೂರು : ಅಕ್ಟೋಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 21 ದಿನ ಬ್ಯಾಂಕ್ ರಜೆ ಇದ್ದು ಕರ್ನಾಟಕದಲ್ಲಿ ಒಟ್ಟು ಹನ್ನೊಂದು ದಿನ ಬ್ಯಾಂಕ್ ರಜೆ ಇರಲಿದೆ ಎಂದು RBI ಬಿಡುಗಡೆ ಮಾಡಿದ ವೇಳಾಪಟ್ಟಿ ತಿಳಿಸಿದೆ. ಆದರೆ ಆನ್ಲೈನ್ ಬ್ಯಾಂಕಿಂಗ್ ಎಂದಿನಂತೆ ಚಾಲ್ತಿಯಲ್ಲಿ ಇರುತ್ತವೆ.
ಅಕ್ಟೋಬರ್ ತಿಂಗಳಲ್ಲಿ ದಸರಾ ಪ್ರಯಕ್ತ ಹೆಚ್ಚು ದಿನ ಬ್ಯಾಂಕ್ ರಜೆಗಳಿದ್ದು, ಗ್ರಾಹಕರು ರಜೆ ಗಳಿಗೂ ಮುಂಚೆ ತಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಲು ಮುಂದಾಗುತ್ತಿದ್ದು ಆತಂಕದಿಂದ ಗೊಂದಲಕ್ಕೆ ಒಳಗಾಗಿದ್ದಾರೆ. ಗೊಂದಲಕ್ಕೆ ಉತ್ತರಿಸಿದ ಭಾರತೀಯ ರಿಸರ್ವ್ ಬ್ಯಾಂಕ್ (RBI) ತಮ್ಮ ಗ್ರಾಹಕರಿಗೆಂದು ಬ್ಯಾಂಕ್ ರಜಾ ದಿನಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ ವಾರಾಂತ್ಯದ ರಜಾದಿನಗಳು ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ ಒಟ್ಟು 21 ಬ್ಯಾಂಕ್ ರಜಾದಿನಗಳಿವೆ. ಕೆಲವು ರಜಾದಿನಗಳು ಕೆಲವು ಜಿಲ್ಲೆಗೆ ಮಾತ್ರ ನಿರ್ದಿಷ್ಟವಾಗಿದ್ದು, ಕರ್ನಾಟಕದಲ್ಲಿ ಒಟ್ಟು 11 ದಿನ ಬ್ಯಾಂಕ್‌ಗಳ ರಜಾ ದಿನವಾಗಿದೆ. ಆದ್ದರಿಂದ ಬ್ಯಾಂಕ್ ವ್ಯವಹಾರಕ್ಕೆ ಬರುವವರು ಬ್ಯಾಂಕ್ ರಜಾ ದಿನಗಳನ್ನು ನೋಡಿ ಬ್ಯಾಂಕ್ ಗೆ ಹೋಗುವುದು ಒಳಿತು. ಆದರೆ ಗ್ರಾಹಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಏಕೆಂದರೆ ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಲಭ್ಯವಿರುತ್ತದೆ ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳನ್ನು ತಿಳಿಯುವುದಾದರೆ,
ಅಕ್ಟೋಬರ್ 2 – ಗಾಂಧಿ ಜಯಂತಿ ಮತ್ತು ಭಾನುವಾರದ ರಜೆ
ಅಕ್ಟೋಬರ್ 4 – ಮಹಾನವಮಿ
ಅಕ್ಟೋಬರ್ 5 – ವಿಜಯದಶಮಿ
ಅಕ್ಟೋಬರ್ 8 – 2ನೇ ಶನಿವಾರ
ಅಕ್ಟೋಬರ್ 9 – ವಾಲ್ಮೀಕಿ ಜಯಂತಿ ಮತ್ತು ಭಾನುವಾರದ ರಜೆ
ಅಕ್ಟೋಬರ್ 16 – ಭಾನುವಾರದ ರಜೆ
ಅಕ್ಟೋಬರ್ 22 – 4ನೇ ಶನಿವಾರ
ಅಕ್ಟೋಬರ್ 23 – ಭಾನುವಾರದ ರಜೆ
ಅಕ್ಟೋಬರ್ 24- ನರಕ ಚತುರ್ದಶಿ
ಅಕ್ಟೋಬರ್ 26 – ದೀಪಾವಳಿ
ಅಕ್ಟೋಬರ್ 30 – ಭಾನುವಾರದ ರಜೆ
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನು ನೋಡಿ: ಕಾಂತಾರ ಸಿನಿಮಾ ಅಭಿಮಾನಿಯಿಂದ ಸರ್ಕಾರಕ್ಕೆ ರೈಟ್ ಲೆಫ್ಟ್
peepal/ಪೀಪಲ್ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ