Monday, April 29, 2024

ಸತ್ಯ | ನ್ಯಾಯ |ಧರ್ಮ

ಕೆಇಎ ಹಗರಣ: ಆರೋಪಿಯ ಪರಾರಿಗೆ ಸಹಕರಿಸಿದ್ದ ಇಬ್ಬರ ಬಂಧನ

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) (Karnataka Examination Authority (KEA)) ಪರೀಕ್ಷಾ ಹಗರಣದ ಮುಖ್ಯ ಆರೋಪಿಗೆ ಆಶ್ರಯ ನೀಡಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರನ್ನು ಶಹಾಪುರ ಮೂಲದ ಶಂಕರಗೌಡ ಯಳವರ (Shankar Gouda Yalawar) ಮತ್ತು ಕಲಬುರಗಿ ನಿವಾಸಿ ದಿಲೀಪ್ ಪವಾರ (Dilip Pawar) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಶಂಕರಗೌಡ ಪರೀಕ್ಷಾ ಹಗರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ (R.D. Patil) ತನ್ನ ಫ್ಲಾಟ್ನನು ಬಾಡಿಗೆ ನೀಡಿದ್ದು, ದಿಲೀಪ್‌ ಪವಾರ ಅದಕ್ಕೆ ಸಹಾಯ ಮಾಡಿದ್ದ ಎನ್ನಲಾಗಿದೆ.

ದಿಲೀಪ್ ಆರ್.ಡಿ.ಪಾಟೀಲನಿಂದ 10 ಸಾವಿರ ಮುಂಗಡ ಪಡೆದು ಶಂಕರಗೌಡನಿಗೆ ನೀಡಿದ್ದ. ಇಬ್ಬರೂ ಕೂಡಿ ಪಾಟೀಲನಿಗೆ ಆಶ್ರಯ ನೀಡಿ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆ.

ನವೆಂಬರ್ 6ರಂದು ಪಾಟೀಲ ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಗೋಡೆ ಹಾರಿ ಫ್ಲಾಟ್‌ನಿಂದ ಪರಾರಿಯಾಗಿದ್ದರು ಮತ್ತು ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಟೀಲ್ ವಿರುದ್ಧ 16 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ನೇಮಕಾತಿ ಹಗರಣಗಳಿಗೆ (exam scam) ಸಂಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಆದರೆ ಕೆಲವು ಅಭ್ಯರ್ಥಿಗಳು ನಕಲು ಮಾಡುವ ಸಲುವಾಗಿ ಬ್ಲೂಟೂತ್ ಸಾಧನಗಳನ್ನು ಬಳಸಿದ ಹಗರಣವನ್ನು ಕರ್ನಾಟಕ ಪೊಲೀಸ್ ಇಲಾಖೆಯು ಕೂಲಂಕುಷವಾಗಿ ತನಿಖೆ ನಡೆಸುತ್ತಿದೆ ಎಂದು ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮರ್ಥಿಸಿಕೊಂಡಿದ್ದಾರೆ.

ಆರೋಪಿ ಪಾಟೀಲ ಪಿಎಸ್ಐ ಹಗರಣದಲ್ಲಿ ಜಾಮೀನು ಪಡೆದ ನಂತರ ಕರ್ನಾಟಕದ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ.

Related Articles

ಇತ್ತೀಚಿನ ಸುದ್ದಿಗಳು